Bengaluru, ಫೆಬ್ರವರಿ 3 -- ರಾತ್ರಿ ಮಲಗುವಾಗ ಒಳ್ಳೆಯ ನಿದ್ರೆ ಬರಬೇಕು, ಮನಸ್ಸು ಮತ್ತು ದೇಹಕ್ಕೆ ಉತ್ತಮ ವಿಶ್ರಾಂತಿ ದೊರಕಬೇಕು ಎಂದು ಎಲ್ಲರೂ ಬಯಸುತ್ತಾರೆ. ಸುಖನಿದ್ರೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಬರುವುದಿಲ್ಲ. ಅದಕ್ಕಾಗಿ ವಿವಿಧ ತಂತ್ರಗಳ ಮೊರೆಹೋಗುವವರೂ ಇದ್ದಾರೆ. ಆದರೆ ಬಹಳಷ್ಟು ಮಂದಿ ರಾತ್ರಿ ಮಲಗುವಾಗ ಒಳಉಡುಪು ಧರಿಸದೇ ಮಲಗಿದರೆ ಉತ್ತಮ ನಿದ್ರೆ ಬರುತ್ತದೆ ಎನ್ನುತ್ತಾರೆ. ಆದರೆ ಇನ್ನು ಕೆಲವರು ಕೇವಲ ಒಳಉಡುಪು ಮಾತ್ರ ಧರಿಸಿ ಮಲಗುತ್ತಾರೆ, ಹಾಗೆ ಮಲಗಿದರೆ ಮಾತ್ರ ಉತ್ತಮ ನಿದ್ರೆ ಬರುತ್ತದೆ ಎನ್ನುತ್ತಾರೆ. ಆದರೆ ಹಾಗೆ ಒಳಉಡುಪು ಮಾತ್ರ ಧರಿಸಿ ಮಲಗಿದರೆ ಸಮಸ್ಯೆಯಾಗುತ್ತದೆ ಎನ್ನುವುದು ತಜ್ಞ ವೈದ್ಯರ ಅಭಿಪ್ರಾಯ. ಒಳಉಡುಪು ತೆಗೆದು, ತೆಳುವಾದ ಮತ್ತು ಸರಳ ಉಡುಪು ಧರಿಸಿ ಮಲಗುವುದೇ ಉತ್ತಮ ಎನ್ನುವುದು ವೈದ್ಯರ ಸಲಹೆಯಾಗಿದೆ.

ಈ ಕುರಿತು ಬಹಳಷ್ಟು ಜನರಲ್ಲಿ ವಿವಿಧ ರೀತಿಯ ಅಭಿಪ್ರಾಯಗಳಿವೆ. ತಜ್ಞವೈದ್ಯರ ಪ್ರಕಾರ, ರಾತ್ರಿ ಮಲಗುವಾಗ ಬಿಗಿಯಾದ ಒಳಉಡುಪು ಧರಿಸಿ ಮಲಗುವುದರಿಂದ, ದೇಹ ಮತ್ತು ಚರ್ಮದ ಮೇಲೆ ಪ...