Bangalore, ಮಾರ್ಚ್ 21 -- Sky Force OTT: ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲಿಷ‌ ಸಬ್‌ಟೈಟಲ್‌ನಲ್ಲಿ ನೋಡಬಹುದು. ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸಿನಿಮಾ ಇದಾಗಿದೆ.

ಭಾರತದ ಐತಿಹಾಸಿಕ ಮೊದಲ ವಾಯುದಾಳಿಯ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರವು 1965 ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯ...