Bengaluru, ಮಾರ್ಚ್ 11 -- ಹೆಣ್ಮಕ್ಕಳಿಗೆ ತಮ್ಮ ತ್ವಚೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ಇರುತ್ತದೆ. ಸುಂದರವಾಗಿ ಕಾಣಲು ಏನೆಲ್ಲಾ ಮಾಡಬೇಕು ಎಂದು ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುವುದು ಅಥವಾ ದುಬಾರಿ ಉತ್ಪನ್ನಗಳನ್ನು ಬಳಸುವುದು ಇತ್ಯಾದಿ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಕೂಡ ಸಾಕಷ್ಟು ಉತ್ಪನ್ನಗಳು ಲಭ್ಯವಿದೆ. ಬದಲಾದ ಹವಾಮಾನಕ್ಕೆ ತಕ್ಕಂತೆ ವೈಯಕ್ತಿಕವಾಗಿ ಬದಲಾಗುತ್ತಿರುವ ನಮ್ಮ ದಿನಚರಿಗನುಗುಣವಾಗಿ ಚರ್ಮದ ಅಗತ್ಯತೆಗೆ ತಕ್ಕಂತೆ ನೂತನ ಉತ್ಪನ್ನಗಳು ಬಿಡುಗಡೆಗೊಳ್ಳುತ್ತಿವೆ. ಅಲ್ಲದೆ ಹವಾಮಾನ ಬದಲಾದಾಗ ಉಂಟಾಗುವ ವೈಪರೀತ್ಯವು ಚರ್ಮದ ಮೇಲೆ ಗಂಭೀರ ಪ್ರಭಾವ ಬೀರುತ್ತವೆ. ಹೀಗಾಗಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಡಾ. ಕರುಣಾ ಮಲ್ಹೋತ್ರಾ (ನವದೆಹಲಿಯ ರಾಜೌರಿ ಗಾರ್ಡನ್‌ನಲ್ಲಿರುವ ಕಾಸ್ಮೆಟಿಕ್ ಸ್ಕಿನ್ ಮತ್ತು ಹೋಮಿಯೋ ಕ್ಲಿನಿಕ್‌ನ ಕಾಸ್ಮೆಟಾಲಜಿಸ್ಟ್ ಮತ್ತು ಸೌಂದರ್ಯಶಾಸ್ತ್ರಜ್ಞ) ಮತ್ತು ಡಾ. ಶ್ವೇತಾ ಮಿಶ್ರಾ (ನವದೆಹಲಿಯ ಪಿತಾಂಪುರ ಮತ್ತು ರೋಹಿಣಿಯ ಶರ್ವಾ ಕ್ಲ...