ಭಾರತ, ಮಾರ್ಚ್ 30 -- Identification of a Pure Silk Saree: ಭಾರತೀಯ ಹೆಣ್ಣುಮಕ್ಕಳಿಗೆ ಸೀರೆ ಮೇಲೆ ವಿಶೇಷ ಒಲವು. ಹಬ್ಬ, ಮದುವೆ, ಗೃಹಪ್ರವೇಶ ಇಂತಹ ಯಾವುದೇ ವಿಶೇಷ ಸಂದರ್ಭದಲ್ಲೂ ಸೀರೆ ಉಡದಿದ್ದರೆ ಅವರ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ಅದರಲ್ಲೂ ರೇಷ್ಮೆ ಸೀರೆ ಮೇಲೆ ಹೆಣ್ಣುಮಕ್ಕಳಿಗೆ ಪ್ರೀತಿ ಜಾಸ್ತಿ. ಜೊತೆಗೆ ರೇಷ್ಮೆ ಸೀರೆಯ ಬೆಲೆಯೂ ಜಾಸ್ತಿ. ಆದರೆ ರೇಷ್ಮೆ ಸೀರೆಯ ಗತ್ತು, ಗಾಂಭೀರ್ಯವೇ ಬೇರೆ.

ಅಪ್ಪಟ ರೇಷ್ಮೆ ಸೀರೆ ಎಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರಾದರೂ ಅದರ ಒರಿಜಿನಾಲಿಟಿ ಬಗ್ಗೆ ಯೋಚಿಸಬೇಕಾಗುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸೀರೆಯನ್ನೂ ಕೂಡ ನಕಲು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲೇ ಅಸಲಿ ರೇಷ್ಮೆ ಸೀರೆಯಂತೆ ಕಾಣುವ ಸೀರೆಗಳ ಮಾರಾಟವೂ ನಡೆಯುತ್ತಿದೆ. ದುಬಾರಿ ದರ ಕೊಟ್ಟು ಖರೀದಿಸಿದ ಸೀರೆ ಅಸಲಿಯೋ ನಕಲಿಯೋ ಎಂಬುದನ್ನು ತಿಳಿಯಲು ಇಲ್ಲಿವೆ ಕೆಲವು ಸಿಂಪಲ್ ಟ್ರಿಕ್‌ಗಳು. ಆ ಮೂಲಕ ನೀವು ಯಾವುದು ಅಸಲಿ, ಯಾವುದು ನಕಲಿ ಎಂದು ತಿಳಿಯಬಹುದು.

ನಿಜವಾದ ರೇಷ್ಮೆ ಸೀರೆಯನ್ನು ಗುರುತಿಸಲು...