Bengaluru, ಮಾರ್ಚ್ 23 -- Sikandar Trailer: ಅಭಿಮಾನಿಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಬಾಲಿವುಡ್‌ನ ಬಹುನಿರೀಕ್ಷಿತ 'ಸಿಕಂದರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಸಲ್ಮಾನ್ ಖಾನ್ ಫ್ಯಾನ್ಸ್‌ ಅಕ್ಷರಶಃ ಸಂಭ್ರಮದಲ್ಲಿದ್ದಾರೆ. ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿರುವ ಸಲ್ಮಾನ್‌ ಖಾನ್‌, ಇದೇ ಮಾರ್ಚ್‌ 30ರ ಈದ್‌ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಎಂಟ್ರಿಕೊಡಲಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿರುವ ಸಿಕಂದರ್‌ ಸಿನಿಮಾವನ್ನು ಗಜನಿ ಸಿನಿಮಾ ಖ್ಯಾತಿಯ ಎ.ಆರ್‌ ಮುರುಗದಾಸ್‌ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚುಹರಿಸಿದ್ದಾರೆ.

ಸೌತ್‌ನಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಸದ್ದು ಮಾಡಿರುವ ನಿರ್ದೇಶಕ ಮುರುಗದಾಸ್‌, ಸಿಕಂದರ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಾಜಿದ್‌ ನಾಡಿಯಾಡ್ವಾಲಾ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ರಾಜ್‌ಕೋಟ್‌ನ ರಾಜ ಎಂದೇ ಖ್ಯಾತಿ ಪಡೆದ ಸಿಕಂದರ್‌ನ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸ...