ಭಾರತ, ಫೆಬ್ರವರಿ 27 -- ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಸಿಕಂದರ್ ಟೀಸರ್ ಬಿಡುಗಡೆಯಾಗಿದೆ. ಈಗಾಗಲೇ ಈ ಸಿನಿಮಾದ ಫಸ್ಟ್‌ ಲುಕ್ ಬಿಡುಗಡೆಯಾಗಿತ್ತು. ಸಲ್ಮಾನ್‌ ಖಾನ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನೂ ಈ ಚಿತ್ರ ಮೂಡಿಸಿದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸಲ್ಮಾನ್ ಖಾನ್ ಅವರನ್ನು ತೆರೆಯ ಮೇಲೆ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇಂದು (ಫೆ 27) ಬಿಡುಗಡೆಯಾದ ಸಿಕಂದರ್ ಟೀಸರ್‍‌ನಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡಿದ್ದಾರೆ. 1 ನಿಮಿಷದ 21 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾಸ್‌ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ನಂತರದಲ್ಲಿ ಅಭಿಮಾನಿಗಳು ಸಿನಿಮಾ ಹೇಗಿರಬಹುದು ಎಂದು ಊಹೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಎದುರಾಳಿಯ ದಾಳಿಯನ್ನು ತಡೆಯಲು ಸಲ್ಮಾನ್ ಖಾನ್‌ ಹೋರಾಡಿದ ರೀತಿ ಮತ್ತು ಫೈಟಿಂಗ್‌ ಸೀನ್‌ಗಳು ಟ್ರೇಲರ್‍‌ನಲ್ಲಿ ಹೆಚ್ಚಾಗಿ ಜನರ ಮನ ಸೆಳೆದಿದೆ.

ಇದನ್ನೂ ಓದಿ: Sikandar: ಬಾಲಿವುಡ್‌ನಲ್ಲಿ...