ಭಾರತ, ಮಾರ್ಚ್ 10 -- Sikandar song Bam Bam Bhole: ಸಲ್ಮಾನ್‌ ಖಾನ್‌ ನಟನೆಯ ಮುಂಬರುವ ಚಿತ್ರ ಸಿಕಂದರ್‌. ಇದು ಈ ವರ್ಷದ ಬಹುನಿರೀಕ್ಷಿತ ಚಿತ್ರ. ಎಆರ್‌ ಮುರುಗಾದಾಸ್‌ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಆಕ್ಷನ್‌ ಪ್ಯಾಕ್ಡ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಕರ್ನಾಟಕ ಮೂಲದ ರಶ್ಮಿಕಾ ಮಂದಣ್ಣ ಈ ಸಿನಿಮಾದ ಹೀರೋಯಿನ್. ‌ಸಲ್ಮಾನ್‌ ಖಾನ್‌- ರಶ್ಮಿಕಾ ಮಂದಣ್ಣ ರೊಮ್ಯಾಟಿಂಕ್‌ ಸೀನ್‌ಗಳೂ ಇರಲಿವೆ. ಜೊಹ್ರಾ ಜಬೀನ್‌ ಹಾಡಿನಲ್ಲಿ ಇವರಿಬ್ಬರ ಸಖತ್‌ ಡ್ಯಾನ್ಸ್‌ ಎಲ್ಲರೂ ನೋಡಿದ್ದಾರೆ. ಇದೀಗ ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಸಿಕಂದರ್‌ ಸಿನಿಮಾದ ಹೊಸ ಟ್ರ್ಯಾಕ್‌ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಈ ಟ್ರ್ಯಾಕ್‌ಗೆ ಬಮ್‌ ಬಮ್‌ ಭೋಲೆ ಎಂಬ ಹೆಸರಿಡಲಾಗಿದೆ. ಈ ಟೈಟಲ್‌ ಟ್ರ್ಯಾಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹೋಳಿ ಹಬ್ಬಕ್ಕೆ ಎಲ್ಲೆಡೆ ಬಮ್‌ ಬಮ್‌ ಭೋಲೆ ಶಂಭೂ ಮೊಳಗಲಿದೆ.

Published by HT Digital Content Services with permission from HT Kannada....