ಭಾರತ, ಮಾರ್ಚ್ 19 -- ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ 'ಸಿಕಂದರ್' ಹೆಚ್ಚು ಪ್ರಚಾರದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇವರಿಬ್ಬರನ್ನೂ ಒಟ್ಟಿಗೆ ತೆರೆಮೇಲೆ ಕಾಣಲು ಸಾಕಷ್ಟು ಅಭಿಮಾನಿಗಳು ಕಾದಿದ್ದಾರೆ. ಈಗಾಗಲೆ ಸಿನಿಮಾದ ಪೋಸ್ಟರ್, ಮೊದಲ ನೋಟ, ಟೀಸರ್, ಹಾಗೂ ಕೆಲ ಹಾಡುಗಳು ಯುಟ್ಯೂಬ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. 200 ಕೋಟಿ ಬಜೆಟ್‌ನೊಂದಿಗೆ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಪ್ರಚಾರವೂ ನಡೆದಿದೆ.

ಸಿಕಂದರ್ ಚಿತ್ರದ ಇತ್ತೀಚಿನ ಹಾಡು ಎಂದರೆ ಅದು ಸಿಕಂದರ್ ನಾಚೆ ಎಂಬ ಹಾಡು. ಈ ಹಿಂದೆಯೂ ಬೇರೆ ಬೇರೆ ಹಾಡುಗಳು ಬಿಡುಗಡೆಯಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲೂ ಒಂದು ಹಾಡು ಬಿಡುಗಡೆಯಾಗಿತ್ತು. ಆದರೆ, ಸಿಕಂದರ್ ನಾಚೆ ಹಾಡನ್ನು ಜನರು ಹೆಚ್ಚಾಗಿ ಇಷ್ಟಪಟ್ಟಿದ್ದಾರೆ. ಸಿಕಂದರ್ ನಾಚೆ ಎಂಬ ಶೀರ್ಷಿಕೆಯ ಹಾಡು ಮಂಗಳವಾರ (ಮಾರ್ಚ್ 18) ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್...