ಭಾರತ, ಏಪ್ರಿಲ್ 4 -- Sikandar box office collection day 5: ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿರುವ ಸಲ್ಮಾನ್‌ ಖಾನ್‌ ಇದೀಗ ಸಿಕಂದರ್‌ ಮೂಲಕ ನೀರಸ ಪ್ರದರ್ಶನ ನೀಡುತ್ತಿದ್ದಾರೆ. ಸಲ್ಮಾನ್‌ ಖಾನ್‌ ಸಿನಿಮಾಗಳೆಂದರೆ ನೂರಾರು ಕೋಟಿ ಬಾಚುವ ಕಾಲವಿತ್ತು. ಆದರೆ, ಸಿಕಂದರ್‌ ಸಿನಿಮಾ ಬಿಡುಗಡೆಯಾಗಿ ಐದು ದಿನಗಳು ಕಳೆದಿವೆ. ಆದರೆ, ಈ ಸಿನಿಮಾ ನೂರು ಕೋಟಿ ರೂಪಾಯಿ ಗಳಿಕೆ ಮಾಡಲು ಪರದಾಡುತ್ತಿದೆ. ರಶ್ಮಿಕಾ ಮಂದಣ್ಣ ಕೂಡ ನಟಿಸಿರುವ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನೀರಸ ಗಳಿಕೆ ಮಾಡಿದೆ. ಕಳೆದ ಐದು ದಿನಗಳಲ್ಲಿ ಸಿಕಂದರ್‌ ಗಳಿಕೆ 100 ಕೋಟಿ ಕ್ಲಬ್‌ಗೆ ಸೇರಿಲ್ಲ. ಈ ವರ್ಷದ ಬ್ಲಾಕ್‌ಬಸ್ಟರ್‌ ಸಿನಿಮಾವಾಗಬಹುದೆಂದು ನಿರೀಕ್ಷಿಸಿದ್ದ ಸಿಕಂದರ್‌ ಮಕಾಡೆ ಮಲಗಿದೆ.

ಎ.ಆರ್. ಮುರುಗದಾಸ್ ನಿರ್ದೇಶನದ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ ಈದ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಭಿಮಾನಿಗಳು ಮತ್ತು ವಿಮರ್ಶಕರಿಂದ ನೀರಸ ಪ್ರತಿಕ್ರಿಯೆಯನ್ನು ಪಡೆದ ನಂತರ ಚಿತ್ರವು...