ಭಾರತ, ಏಪ್ರಿಲ್ 1 -- Sikandar box office collection day 2: ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಸಿನಿಮಾವು ಮಾರ್ಚ್‌ 30ರಂದು ಈದ್‌ ಪ್ರಯುಕ್ತ ರಿಲೀಸ್‌ ಆಗಿತ್ತು. ಆದರೆ, ಸಿನಿಮಾ ನೋಡಿದ ವೀಕ್ಷಕರು ಮತ್ತು ವಿಮರ್ಶಕರು ಚಿತ್ರ ಏನೂ ಚೆನ್ನಾಗಿಲ್ಲ ಎಂದು ಷರಾ ಬರೆದಿದ್ದರು. ಎರಡನೇ ದಿನವಾದ ಸೋಮವಾರ ಈದ್‌ ಹಬ್ಬದ ರಜೆಯಲ್ಲಿ ಸಲ್ಮಾನ್‌ ಖಾನ್‌ ಅಭಿಮಾನಿಗಳು ಥಿಯೇಟರ್‌ ಪ್ರವೇಶಿಸಿ ತಮ್ಮ ನೆಚ್ಚಿನ ನಟನಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಎರಡನೇ ದಿನದ ಗಳಿಕೆಯಲ್ಲಿ ತುಸು ಚೇತರಿಕೆ ದಾಖಲಾಗಿದೆ.

ಸಕ್‌ನಿಲ್ಕ್‌.ಕಾಂನ ಬಾಕ್ಸ್‌ ಆಫೀಸ್‌ ವರದಿ ಪ್ರಕಾರ ಸೋಮವಾರ ಈ ಸಿನಿಮಾವು 29 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡು ದಿನದಲ್ಲಿ ಒಟ್ಟಾಗಿ 55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಗಳಿಕೆ ತುಸು ಉತ್ತಮವಾಗಿದೆ. ಮೊದಲ ದಿನ ಸಿಕಂದರ್‌ ಸಿನಿಮಾ 26 ಕೋಟಿ ರೂಪಾಯಿ ಗಳಿಸಿತ್ತು.

ಸೋಮವಾರ ಒಟ್ಟಾರೆ ಹಿಂದಿ ಚಿತ್ರದ ಆಕ್ಯುಪೆನ್ಸಿ ಶೇಕಡ 21.75ರಷ್ಟಿತ್ತು. ಅಂದರೆ, ಥಿ...