ಭಾರತ, ಏಪ್ರಿಲ್ 6 -- Sikandar box office collection day 7: ಎಆರ್ ಮುರುಗದಾಸ್ ನಿರ್ದೇಶನದ ಸಲ್ಮಾನ್‌ ಖಾನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಚಿತ್ರ ಬಿಡುಗಡೆಯಾದ ದಿನದಿಂದಲೂ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿರಲಿಲ್ಲ. ಸಿನಿಮಾ ಕಥೆಯು ನೀರಸವಾಗಿದ್ದು, ಜನರು ಚಿತ್ರಮಂದಿರದತ್ತ ಮುಖ ಮಾಡಲು ಹಿಂದೇಟು ಹಾಕುವಂತೆ ಮಾಡಿತ್ತು. ಚಿತ್ರ ಬಿಡುಗಡೆಯಾಗಿ ವಾರ ಕಳೆದರೂ ಬಾಕ್ಸ್ ಆಫೀಸ್‌ ಕಲೆಕ್ಷನ್‌ನಲ್ಲಿ 100 ಕೋಟಿ ಗಳಿಕೆ ಮಾಡಲು ತಿಣುಕಾಡುತ್ತಿದೆ. ಇದೀಗ 7ನೇ ದಿನದ ಲೆಕ್ಕಾಚಾರದ ಪ್ರಕಾರ ಚಿತ್ರವು 100 ಕೋಟಿ ಗಳಿಕೆ ಮಾಡಲು ಸನಿಹದಲ್ಲಿದೆ, ಹಾಗಂತ 100 ಕೋಟಿ ತಲುಪಿಲ್ಲ.

7ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರದಂತೆ ಸಿಕಂದರ್ ಸಿನಿಮಾವು 100 ಕೋಟಿ ಕ್ಲಬ್ ಸೇರಲು ಸನಿಹದಲ್ಲಿದೆ ಎಂದು ಸಕ್ನಿಲ್ಕ್ ವರದಿ ತಿಳಿಸಿದೆ. ಅದರ ಪ್ರಕಾರ ಸಿಕಂದರ್ ಸಿನಿಮಾವು ಒಂದು ವಾರದಲ್ಲಿ ಭಾರತದಲ್ಲಿ 97.03 ಕೋಟಿ ನಿವ್ವಳ ಗಳಿಕೆ ಮಾಡಿದೆ.

ಇದನ್ನೂ ಓದಿ: Sikandar Movie: 100 ಕೋಟಿ ರೂಪಾಯಿ ಸಂಪ...