Bengaluru, ಮಾರ್ಚ್ 29 -- Sikandar Advance Booking: ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಈ ವರ್ಷದ ಅತ್ಯಂತ ಬಹುನಿರೀಕ್ಷಿತ ಚಿತ್ರ ʻಸಿಕಂದರ್ʼ ಈದ್ ಹಬ್ಬದ (ಮಾ. 30) ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆಯಾದ ನಾಲ್ಕು ದಿನಗಳ ನಂತರ, ಗುರುವಾರದಿಂದ ಭಾರತದಾದ್ಯಂತ ಬುಕಿಂಗ್ ವೆಬ್‌ಸೈಟ್ BookMyShowನಲ್ಲಿ ಮುಂಗಡ ಬುಕಿಂಗ್‌ ಶುರುವಾಗಿದೆ.

ಟ್ರೇಡ್ ಇಂಡಸ್ಟ್ರಿ ಟ್ರ್ಯಾಕರ್ Sacnilk.com ಪ್ರಕಾರ, ಶುಕ್ರವಾರ ರಾತ್ರಿ 10.30ರ ವೇಳೆಗೆ ಸಲ್ಮಾನ್ ಖಾನ್ ಅವರ ಚಿತ್ರವು 10.75 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕೇವಲ ಮುಂಗಡ ಬುಕಿಂಗ್ ಮೂಲಕ ಗಳಿಸಿದೆ. ಒಟ್ಟಾರೆ, ದೇಶ ವಿದೇಶ ಸೇರಿ ಸಿಕಂದರ್‌ ಸಿನಿಮಾ 10 ಕೋಟಿಗೂ ಅಧಿಕ ಸೀಟುಗಳನ್ನು ಬ್ಲಾಕ್ ಮಾಡಿಕೊಂಡಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸುವಲ್ಲಿ ಸಿಕಂದರ್‌ ದಾಪುಗಾಲಿಟ್ಟಿದ್ದಾನೆ.

ಭಾರತದಾದ್ಯಂತ 14,617 ಶೋಗಳಿಂದ 10 ಕೋಟಿ ರೂ. ಮೌಲ್ಯದ ಟಿಕೆಟ್ ಮಾರಾಟವಾಗಿವೆ. ಇದರಲ್ಲಿ 2D ಮತ್ತು IMAX 2D ಪ್ರದರ್ಶನಗಳಿಂದ 4.99 ಕೋಟಿ ರೂ. ಗಳಿ...