ಭಾರತ, ಏಪ್ರಿಲ್ 7 -- Sikandar hit or flop: ಸಲ್ಮಾನ್‌ ಖಾನ್ ಅಭಿಮಾನಿಗಳಿಗೆ ಈದ್ ಹಬ್ಬದ ಉಡುಗೊರೆ ಎಂಬಂತೆ ಸಿಕಂದರ್ ಸಿನಿಮಾ ಬಿಡುಗಡೆಯಾಗಿತ್ತು. ಸಲ್ಮಾನ್ ಹಾಗೂ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಚಿತ್ರವು ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. 2 ವರ್ಷಗಳ ನಂತರ ಸಲ್ಮಾನ್‌ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಅಭಿಮಾನಿಗಳಲ್ಲೂ ಸಿನಿಮಾ ನೋಡುವ ಕಾತುರ ಹೆಚ್ಚಿತ್ತು. ಮಾರ್ಚ್ 30ರಂದು ಸಿಕಂದರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.

ಆದರೆ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಜನರನ್ನು ತಲುಪಲು ಯಶಸ್ವಿಯಾಗಲಿಲ್ಲ. ನೀರಸ ವಿಮರ್ಶೆಗಳನ್ನು ಪಡೆದಿರುವುದು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಯ್ತು. ಹಳೆ ಅನ್ನಕ್ಕೆ ಒಗ್ಗರಣೆ ಹಾಕಿದ ಹಾಗಿತ್ತು ಎಂದು ಸಿಕಂದರ್ ಬಗ್ಗೆ ಟೀಕೆ ಶುರುವಾಗಿತ್ತು. ಸಲ್ಮಾನ್ ಸಿನಿಮಾ ಚೆನ್ನಾಗಿಲ್ಲ ಎಂಬ ವಿಮರ್ಶೆಯ ನಡುವೆಯೂ ಕಲೆಕ್ಷನ್ ವಿಚಾರದಲ್ಲಿ ಹಿ...