ಭಾರತ, ಮಾರ್ಚ್ 7 -- ಕೆಲವೊಂದು ಸಿನಿಮಾಗಳು ಬಿಡುಗಡೆಯಾದ ಬಳಿಕ ಮಕಾಡೆ ಮಲಗಿ ಬಿಡುತ್ತವೆ. ಲಾಭ ಬಿಡಿ, ಹಾಕಿದ ಅಸಲು ವಾಪಸ್‌ ಬರುವುದು ಕಷ್ಟ ಎನ್ನುವ ಪರಿಸ್ಥಿತಿ ಇರುತ್ತದೆ. ಇನ್ನು ಕೆಲವು ಸಿನಿಮಾಗಳು ಬಿಡುಗಡೆಗೆ ಮುನ್ನವೇ ಕೋಟ್ಯಂತರ ರೂಪಾಯಿ ಬಾಚಿಕೊಂಡುಬಿಡುತ್ತವೆ. ಈದ್‌ ಹಬ್ಬದಂದು ಬಿಡುಗಡೆಯಾಗುವ ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಸಿನಿಮಾ ಈಗಾಗಲೇ ಹಲವು ಕೋಟಿ ಗಳಿಸಿದೆ. ಸಿಕಂದರ್ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲೇ ಲಾಭದ ಹಾದಿಯಲ್ಲಿದೆ. ಈಗಾಗಲೇ ಸಿನಿಮಾದ ಬಜೆಟ್‌ನ ಶೇಕಡ 80ರಷ್ಟು ಹಣವನ್ನು ಪಡೆದಿದೆ. 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾವು ಈಗಾಗಲೇ 165 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ.

ಪಿಂಕ್‌ವಿಲ್ಲಾ ಪ್ರಕಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್‌ ಹಕ್ಕುಗಳ ಮಾರಾಟದಿಂದ 85 ಕೋಟಿಯಿಂದ 100 ಕೋಟಿಯವರೆಗೆ ಗಳಿಸಬಹುದು. ಈ ಸಿನಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಿರ್ದಿಷ್ಟ ಸಮಯದ ಬಳಿಕ ನೆಟ್‌...