ಭಾರತ, ಫೆಬ್ರವರಿ 19 -- ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಸಿಕಂದರ್‍‌ನ ಹೊಸ ಪೋಸ್ಟರ್ ನಿನ್ನೆ (ಫೆ 18) ಬಿಡುಗಡೆಯಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಹುಟ್ಟುಹಬ್ಬದಂದು ಸಲ್ಮಾನ್‌ಖಾನ್‌ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್‍‌ನಲ್ಲಿ ಸಲ್ಮಾನ್ ಖಾನ್‌ ಅವರ ಮುಖ ಹಾಗೂ ಅವರ ತೀವ್ರವಾದ ನೋಟವೇ ಎದ್ದು ಕಾಣುವಂತಿದೆ. ಫೆಬ್ರವರಿ 27 ರಂದು ಒಂದು ದೊಡ್ಡ ಆಶ್ಚರ್ಯ ಕಾದಿದೆ ಎಂಬ ಸುಳಿವನ್ನೂ ಕೊಟ್ಟಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ಕಾತರತೆ ಹೆಚ್ಚಿದೆ.

ಬಿಡುಗಡೆಯಾದ ಪೋಸ್ಟರ್ ನೋಡಿದ ನಂತರದಲ್ಲಿ ಅಭಿಮಾನಿಗಳು ಸಿನಿಮಾ ಹೇಗಿರಬಹುದು ಎಂದು ಊಹೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಎದುರಾಳಿಯ ದಾಳಿಯನ್ನು ತಡೆಯಲು ಸಲ್ಮಾನ್ ಖಾನ್‌ ಸಿದ್ಧರಾಗಿರುವಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಷ್ಟೇ ಅಲ್ಲ ಪೋಸ್ಟರ್ ಹಿಂದಿನ ಮ್ಯೂಸಿಕ್ ಸಾಕಷ್ಟು ಜನರ ಮನ ಗೆದ್ದಿದೆ.

ಸಲ್ಮಾನ್ ಅವರ ಸಿಕಂದರ್ ಚಿತ್ರ 202...