ಭಾರತ, ಫೆಬ್ರವರಿ 14 -- '2' ಹೆಸರಿನಲ್ಲಿ ಸಿನಿಮಾ ಮಾಡುವುದು ಟ್ರೆಂಡ್‍ ಆಗಿಬಿಟ್ಟಿದೆ. ಆದರೆ, ಮೊದಲ ಚಿತ್ರಕ್ಕೂ ಎರಡನೆಯ ಚಿತ್ರಕ್ಕೂ ಸಂಬಂಧವೇ ಇರುವುದಿಲ್ಲ. ಇಂದು (ಫೆ 14) ಬಿಡುಗಡೆಯಾದ 'ಸಿದ್ಲಿಂಗು 2' ಚಿತ್ರವು 2012ರಲ್ಲಿ ಬಿಡುಗಡೆಯಾದ 'ಸಿದ್ಲಿಂಗು' ಚಿತ್ರದ ಅಕ್ಷರಶಃ ಮುಂದುವರೆದ ಭಾಗ. ಅಲ್ಲಿನ ಸಿದ್ಲಿಂಗು ಜೀವನ ಈಗ ಎಷ್ಟು ಬದಲಾಗಿದೆ ಮತ್ತು ಕಾರು ಕೊಂಡುಕೊಳ್ಳಬೇಕು ಎಂಬ ಅವನ ಆಸೆ ಈಡೇರುತ್ತದಾ? ಎಂಬುದರ ಕುರಿತು 'ಸಿದ್ಲಿಂಗು 2' ಚಿತ್ರ ಸಾಗುತ್ತದೆ.

'ಸಿದ್ಲಿಂಗು' ಚಿತ್ರ ಪ್ರೇಕ್ಷಕರಿಗೆ ನೆನಪಿದ್ದರೆ, ಅದರಲ್ಲಿ ಹಳೆಯ ಕಾರೊಂದನ್ನು ಖರೀದಿಸಬೇಕು ಎಂಬ ಸಿದ್ಲಿಂಗು ಎಂಬ ಯುವಕನ ಆಸೆಯ ಕುರಿತಾಗಿ ಚಿತ್ರ ಸಾಗುತ್ತದೆ. ಆದರೆ, ಅವನು ಇಷ್ಟಪಟ್ಟ ಕಾರು ಮತ್ತು ಮಂಗಳಾ ಟೀಚರ್‍ (ರಮ್ಯಾ) ಇಬ್ಬರೂ ಸಿಗುವುದಿಲ್ಲ. ತನ್ನ ಆಸೆ ಕೈಗೂಡದೆ ತನ್ನವರನ್ನು ಕಳೆದುಕೊಂಡ ದುಖದಲ್ಲಿದ್ದ ಸಿದ್ಲಿಂಗುಗೆ ಈ ಬಾರಿ ಒಂದಿಷ್ಟು ಹೊಸ ಜನರ ಪರಿಚಯವಾಗುತ್ತದೆ. ಅವರ ಜೊತೆಗೆ ಜೀವನ ಸಾಗಿಸುತ್ತಿರುವಾಗಲೇ ತನ್ನ ಹಳೆಯ ಕಾರು ಮತ್ತೊಮ್ಮೆ ಕಾಣುತ...