Bangalore, ಮಾರ್ಚ್ 5 -- Siddaramaiah Budget: ಕರ್ನಾಟಕದ ಏಳು ದಶಕದ ಆಡಳಿತ ಇತಿಹಾಸದಲ್ಲಿ ಹಲವರು ಬಜೆಟ್‌ ಅನ್ನು ಮಂಡಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಿಯೂ ಹಲವರು ಬಜೆಟ್‌ ಅನ್ನು ಮಂಡಿಸಿದ ಸಂಖ್ಯೆಯೇ ಹೆಚ್ಚಿದೆ. ಹಣಕಾಸು ಸಚಿವರಾಗಿಯೂ ಹಲವರು ಆಯವ್ಯಯ ಮಂಡಿಸಿದ ಇತಿಹಾಸವೂ ಕರ್ನಾಟಕದಲ್ಲಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಬಜೆಟ್‌ ಮಂಡಿಸಿರುವ ಇತಿಹಾಸ ಇರುವುದು ಸಿದ್ದರಾಮಯ್ಯ ಅವರ ಹೆಸರಿನಲ್ಲಿಯೇ. ಏಳು ವರ್ಷದ ಹಿಂದೆಯೇ ಬಜೆಟ್‌ ಮಂಡಿಸಿದಾಗ ಸಿದ್ದರಾಮಯ್ಯ ಅವರು ಹಿಂದಿನ ಸಿಎಂ ರಾಮಕೃಷ್ಣಹೆಗಡೆ ಅವರ ಅತ್ಯಧಿಕ 13 ಬಜೆಟ್‌ ಮಂಡಿಸಿದ ದಾಖಲೆಯನ್ನು ಸರಿಗಟ್ಟಿದ್ದರು. ಎರಡನೇ ಬಾರಿ ಸಿಎಂ ಆದ ಬಳಿಕ ಮೂರನೇ ಬಾರಿಗೆ ಬಜೆಟ್‌ ಮಂಡಿಸಲು ಸಿದ್ದರಾಮಯ್ಯ ಅಣಿಯಾಗಿದ್ದಾರೆ. ಈ ಮೂಲಕ ಒಟ್ಟು 16 ಬಾರಿ ಬಜೆಟ್‌ ಮಂಡಿಸಿದ ಮೊದಲ ನಾಯಕ ಎನ್ನುವ ಹಿರಿಮೆ ಅವರ ಹೆಸರಿನಲ್ಲಿಯೇ ಇರಲಿದೆ. ಭಾರತದಲ್ಲೂ ಅತೀ ಹೆಚ್ಚು ಮಂಡಿಸಿದ ಹೆಸರು ಇರುವುದು ಗುಜರಾತ್‌ನ ಹಣಕಾಸು ಸಚಿವರಾಗಿದ್ದ ವಜೂಭಾಯ್‌ ವಾಲ ಅವರ ಹೆಸರಲ್ಲಿ. ಅವರು 18 ...