Bengaluru, ಮಾರ್ಚ್ 7 -- ಸ್ಯಾಂಡಲ್‌ವುಡ್‌ ನಟಿ ಶುಭಾ ಪೂಂಜಾ ಅವರ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ (ಮಾ 6) ನಿಧನರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ ಶುಭಾ ಪೂಂಜ.

"ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ"

"ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ ನೀನು ನನ್ನ ಯಾಕೆ ಬಿಟ್ಟು ಹೋದೆ. "ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ" ಎಂದು ಅಮ್ಮನ ಜತೆಗಿನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

"ಮಾರ್ಚ್ 6 ರಂದು ನಾನು ನನ್ನ ತಾಯಿಯನ್ನು ಕಳೆದುಕೊಂಡೆ.. ಅವಳೇ ನನ್ನ ಜೀವನವಾಗಿದ್ದಳು.. ಇಂದು ನಾನು ರಿಪೇರಿ ಮಾಡಲಾಗದಷ್ಟು ಮುರಿದುಬಿದ್ದಿದ್ದೇನೆ.. ಅವಳಿಲ್ಲದ ಜೀವನವನ್ನು ನಾನು ಊಹಿಸಲೂ ಸಾಧ್ಯವಿಲ್ಲ.. ಅವಳಿಲ್ಲದ ನನ್ನ ಜೀವನಕ್ಕ...