ಭಾರತ, ಫೆಬ್ರವರಿ 23 -- ಬಹುಭಾಷಾ ನಟಿ ಶ್ರಿಯಾ ಶರಣ್ ತಮ್ಮ ಅದ್ಭುತ ನಟನೆ ಮಾತ್ರವಲ್ಲ, ಸುಂದರ ನೀಳಕಾಯ ಹಾಗೂ ಸೊಗಸಿನ ದೇಹಸಿರಿಯ ಕಾರಣದಿಂದಲೂ ಸಾಕಷ್ಟು ಮೆಚ್ಚುಗೆ ಗಳಿಸುತ್ತಾರೆ. ಆಕೆಯ ಸೌಂದರ್ಯದಲ್ಲಿ ಅದೇನೋ ಮಾಂತ್ರಿಕತೆ ಇದೆ. 42ರ ಹರೆಯದಲ್ಲೂ ಆಕೆ 20 ಹುಡುಗಿಯಂತೆ ಕಾಣಿಸುತ್ತಾರೆ.

ಈ ವಯಸ್ಸಿನಲ್ಲೂ ಆಕೆಯ ಗ್ಲಾಮರ್ ಕೊಂಚವೂ ಕಡಿಮೆಯಾಗಿಲ್ಲ. ಫಿಟ್‌ನೆಸ್ ವಿಚಾರದಲ್ಲೂ ಆಕೆ ರಾಜಿ ಮಾಡಿಕೊಂಡಿಲ್ಲ. ಆಕೆಯ ಚರ್ಮವು ಕೂಡ ಯೌವನದ ಹುಡುಗಿಯಂತೆ ಹೊಳೆಯುತ್ತಿರುತ್ತದೆ. ಇದಕ್ಕೆಲ್ಲಾ ಕಾರಣ 6 ವರ್ಷದಿಂದ ಆಕೆ ಅನುಸರಿಸುತ್ತಿರುವ ದಿನಚರಿ. ಹಾಗಾದರೆ ಆಕೆಯ ಫಿಟ್‌ನೆಸ್ ಗುಟ್ಟು ಏನಿರಬಹುದು ಎಂದು ನೀವು ಯೋಚಿಸುತ್ತಿದ್ದರೆ, ಆ ರಹಸ್ಯವನ್ನು ನಾವು ನಿಮಗೆ ಹೇಳುತ್ತೇವೆ.

ಶ್ರಿಯಾ ತಮ್ಮ ವೃತ್ತಿಜೀವನದ ಜೊತೆಗೆ ಆರೋಗ್ಯ ಮತ್ತು ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಶಿಸ್ತುಬದ್ಧ ಜೀವನಕ್ರಮವನ್ನು ಅನುಸರಿಸುತ್ತಾರೆ. ಅವರು ಶೂಟಿಂಗ್‌ನಲ್ಲಿದ್ದರೂ ಮತ್ತು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರೂ, ಫಿಟ್ನೆಸ್ ಬಗ್ಗೆ ಅವ...