ಭಾರತ, ಮಾರ್ಚ್ 28 -- ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ಮಗುವನ್ನು ತನ್ನದೇ ಮಗು ಎಂಬಂತೆ ಪೂರ್ಣಿ ನೋಡಿಕೊಳ್ಳುತ್ತಿದ್ದಾಳೆ.
ಆದರೆ, ಯಾವಾಗಲೂ ಪೂರ್ಣಿಯೇ ಮಗು ನೋಡಿಕೊಳ್ಳುತ್ತಿರುವ ಕಾರಣ ತುಳಸಿಗೆ ಬೇಸರ ಆಗಿದೆ. ಯಾರೊಂದಿಗೂ ಈ ವಿಚಾರವನ್ನು ಹಂಚಿಕೊಂಡಿಲ್ಲ.
ತುಳಸಿ ತನಗಾಗುತ್ತಿರುವ ನೋವನ್ನು ಹಂಚಿಕೊಳ್ಳದೇ ಇದ್ದರೂ ಸಹ ಆ ನೋವು ಏನು ಎಂದು ದೀಪಿಕಾಳಿಗೆ ಅರ್ಥ ಆಗಿದೆ.
ತುಳಸಿ ಕಣ್ಣ ಮುಂದೆ ಇದ್ದರೂ ಸಹ ಮಗುವನ್ನು ಪೂರ್ಣಿಯೇ ಎತ್ತಿಕೊಂಡಿರುತ್ತಿದ್ದಳು. ಅದನ್ನು ಕಂಡು ತುಳಸಿಗೆ ನೋವಾಗುತ್ತಿತ್ತು.
ಮನೆಯಲ್ಲಿರುವ ಇತರ ಸದಸ್ಯರೂ ಸಹ ಮಗುವನ್ನು ತಾನೇ ಎತ್ತಿಕೊಳ್ಳುತ್ತೇನೆ ಎಂದು ಹಠ ಮಾಡುತ್ತಿದ್ದರು.
ದೀಪಿಕಾಗೆ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಿರಲಿಲ್ಲ. ಅವಳು, ಪೂರ್ಣಿ ಹತ್ತಿರ ಸತ್ಯ ಹೇಳಿಬಿಡುತ್ತಾಳೆ.
ಆಗ ಸತ್ಯವನ್ನು ಅರ್ಥ ಮಾಡಿಕೊಂಡ ಪೂರ್ಣಿ ಮಗುವನ್ನು ಮತ್ತೆ ತುಳಸಿಯ ಮಡಿಲಿಗೆ ಹಾಕಿದ್ದಾಳೆ.
Published by HT Digital Content Services with permission from HT Kan...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.