ಭಾರತ, ಮಾರ್ಚ್ 17 -- ತುಳಸಿ ಗರ್ಭಿಣಿಯಾದಾಗಿನಿಂದ ಮಾಧವ ಅವಳನ್ನು ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದಾನೆ.

ವಯಸ್ಸಾದ ತುಳಸಿಗೆ ಮಗು ಆಗುವಾಗ ತೊಂದರೆ ಆಗುವ ಸಾಧ್ಯತೆ ಇತ್ತು. ಆದರೆ, ಡಾಕ್ಟರ್ ತುಂಬಾ ಕಾಳಜಿ ವಹಿಸಿ ಎಲ್ಲವನ್ನೂ ನೋಡಿಕೊಂಡಿದ್ದಾರೆ.

ತುಳಸಿಗೆ ಮಗುವಾದ ಸುದ್ದಿ ಕೇಳಿದ ನಂತರ ಮನೆಯವರೆಲ್ಲರೂ ತುಂಬಾ ಖುಷಿಪಟ್ಟಿದ್ದಾರೆ. ಪುಟ್ಟ ಮಗುವನ್ನು ನೋಡಲು ಎಲ್ಲರೂ ಕಾಯುತ್ತಿದ್ದರು.

ಮಾಧವನ ಮಗ ಹಾಗೂ ಸೊಸೆ ಎಲ್ಲರೂ ಸಹ ಆಸ್ಪತ್ರೆಗೆ ಬಂದು ತುಳಸಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.

ಮಾಧವ ತುಳಸಿಯನ್ನು ಮಾತಾಡಿಸಿದ್ದಾನೆ. "ನಾನು ಬಂದಾಯ್ತಲ್ಲ ಇನ್ನು ಮುಂದೆ ಯಾರ ಕಣ್ಣಲ್ಲೂ ನೀರು ಇರಬಾರದು" ಎಂದು ತುಳಸಿ ಹೇಳಿದ್ದಾಳೆ.

ಆತಂಕದಲ್ಲಿದ್ದ ಎಲ್ಲರಿಗೂ ಈಗ ಸಮಾಧಾನವಾಗಿದೆ. ಎಲ್ಲರೂ ಕಣ್ಣೊರಿಸಿಕೊಂಡಿದ್ದಾರೆ. ತುಳಸಿ "ಮಗು ಎಲ್ಲಿ?" ಎಂದು ಪ್ರಶ್ನೆ ಮಾಡಿದ್ದಾಳೆ.

ಆದರೆ, ಕೊನೆಯಲ್ಲಿ ಒಳಗಡೆ ಬಂದ ಡಾಕ್ಟರ್ ತುಳಸಿ ದೇಹದಲ್ಲಿ ಹೇಗೋ ವಿಷಕಾರಿ ಅಂಶ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರಿಗೂ ಗಾಬರಿಯಾಗಿ...