ಭಾರತ, ಮಾರ್ಚ್ 26 -- Sarada Muraleedharan: ಕೇರಳದ ಮುಖ್ಯ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ ಶಾರದಾ ಮುರಳೀಧರನ್ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವರ್ಣಭೇದ ಹಾಗೂ ಲಿಂಗ ತಾರತಮ್ಯ ಮಾಡುವವರನ್ನು ಕಟುವಾಗಿ ಟೀಕಿಸಿದ್ದಾರೆ ಬರೆದುಕೊಂಡಿದ್ದಾರೆ. ಕಪ್ಪು ಬಣ್ಣವನ್ನು ನಿಂದನೆ ಮಾಡುವವರಿಗೆ ಕಡಕ್ ಕೊಟ್ಟಿರುವ ಅವರು, ಕಪ್ಪು ಎನ್ನುವ ಕಾರಣಕ್ಕೆ ಬಾಲ್ಯದಿಂದಲೂ ತನ್ನೊಳಗೆ ಎಷ್ಟು ಕೀಳರಿಮೆ ಇತ್ತು, ತಾನು ಏನೆಲ್ಲಾ ಅನುಭವಿಸಬೇಕಾಯ್ತು ಎಂಬುದನ್ನೂ ಬರೆದುಕೊಂಡಿದ್ದಾರೆ. ಮಾತ್ರವಲ್ಲ ಈಗ ಇಷ್ಟು ದೊಡ್ಡ ಹುದ್ದೆಗೆ ಬಂದರೂ ಇಲ್ಲೂ ಕೂಡ ಬಣ್ಣದ ಆಧಾರದ ಮೇಲೆ ಜನ ತನ್ನನ್ನು ಕೀಳಾಗಿ ನೋಡುವುದು ನಿಲ್ಲಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕಪ್ಪು ಬಣ್ಣ ಹೊಂದಿರುವ ಕಾರಣಕ್ಕೆ ತಾವು ಎದುರಿಸುತ್ತಿರುವ ಹಾಗೂ ಎದುರಿಸಿದ್ದ ಅನುಭವಗಳ ಬಗ್ಗೆ ಬರೆದುಕೊಂಡಿರುವ ಅವರು 'ನನಗೆ ಕಪ್ಪು ಬಣ್ಣವೇ ಇಷ್ಟ, ನಾನು ಕಪ್ಪು ಬಣ್ಣವನ್ನೇ ಹೊಂದಲು ಇಷ್ಟಪಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಬಣ್ಣದ ಆಧಾರದಲ್ಲಿ ವೃತ್ತಿ ಸಾಮರ್ಥ್ಯವನ್ನೂ ಕೂಡ ಅಳೆಯುತ...