Bengaluru, ಫೆಬ್ರವರಿ 2 -- ಹೊಸ ಶೂ ಅಥವಾ ಚಪ್ಪಲಿ ಧರಿಸಿದಾಗ, ಸ್ವಲ್ಪ ಸಮಯ ಹೊಂದಾಣಿಕೆ ಆಗುವವರೆಗೆ ಅದು ನೋವು ಕೊಡುತ್ತದೆ. ನಂತರ ನಮ್ಮ ಪಾದಕ್ಕೆ ಹೊಂದಿಕೊಳ್ಳುತ್ತದೆ. ಆದರೆ, ಬಹು ಸಮಯದವರೆಗೂ ಯಾವುದೇ ರೀತಿಯ ಶೂ ಮತ್ತು ಚಪ್ಪಲಿ ಧರಿಸಿದರೂ, ಅದರಿಂದ ನೋವು ಉಂಟಾಗುತ್ತದೆ ಎಂದಾದರೆ, ಅಲ್ಲಿ ಸಮಸ್ಯೆ ಇದೆ ಎಂದರ್ಥ. ಕಾಲಿನಲ್ಲಿ ಗುಳ್ಳೆ ಏಳುವುದು ಅಥವಾ ಕುರು ಕಾಣಿಸಿಕೊಳ್ಳುವುದು ಇಲ್ಲವೇ ಪಾದದಲ್ಲಿ ಊತ ಕಾಣಿಸಿಕೊಂಡು ನೋವು ಉಂಟಾಗುತ್ತಿದ್ದರೆ, ಅದರಿಂದ ನಡೆಯಲು ಮತ್ತು ಓಡಲು ಸಮಸ್ಯೆಯಾಗುತ್ತದೆ. ಸೂಕ್ತ ರೀತಿಯ ಚಪ್ಪಲಿ ಮತ್ತು ಶೂ ಧರಿಸಿದರೂ, ಆ ತೊಂದರೆ ಕಡಿಮೆಯಾಗಿರುವುದಿಲ್ಲ. ಅದಕ್ಕೆ ವೈದ್ಯರು ನೀಡುವ ಕಾರಣ ಹೀಗಿದೆ ನೋಡಿ..

ನವದೆಹಲಿಯ ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯ ಅಭಿಷೇಕ್ ವೈಶ್ ಅವರ ಪ್ರಕಾರ, ಕೆಲವರಿಗೆ ಕಾಲಿನಲ್ಲಿ ಗುಳ್ಳೆ ಏಳುವುದು ಅಥವಾ ಕುರು ಕಾಣಿಸಿಕೊಳ್ಳುವುದು ವಂಶಪಾರಂಪರ್ಯವಾಗಿದ್ದರೆ, ಇನ್ನು ಕೆಲವರಿಗೆ ಸೂಕ್ತ ಶೂ ಅಥವಾ ಚಪ್ಪಲಿ ಧರಿಸದೇ ಇರುವುದರಿಂದ ಬರುವ ಸಮಸ್ಯೆಯಾಗಿದೆ. ಅಲ್ಲದೆ, ಪಾದದ ಮೇಲೆ ...