ಭಾರತ, ಡಿಸೆಂಬರ್ 9 -- Shivarajkumar Tamil Movie: ಸೆಂಚುರಿ ಸ್ಟಾರ್‌ ಶಿವಣ್ಣ ಕನ್ನಡ ಸಿನಿಮಾ ಹೊರತುಪಡಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಉದಾಹರಣೆ ತುಂಬ ಕಡಿಮೆ. ನಟಿಸುವ ಸಾಕಷ್ಟು ಅವಕಾಶಗಳಿದ್ದರೂ, ಅದೆಲ್ಲವನ್ನು ಬದಿಗಿಟ್ಟು ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಹೀಗಿರುವಾಗ ಇತ್ತೀಚಿನ ಕೆಲ ತಿಂಗಳ ಹಿಂದೆ ರಜನಿಕಾಂತ್‌ ನಟಿಸುತ್ತಿರುವ 'ಜೈಲರ್‌' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡರು. ಇದೀಗ ಮತ್ತೊಂದು ಸಿನಿಮಾದ ಸುದ್ದಿ ಅಧಿಕೃತವಾಗಿದೆ.

'ಜೈಲರ್‌' ಸಿನಿಮಾದಲ್ಲಿ ರಜನಿಕಾಂತ್‌ ಜತೆಗೆ ಶಿವಣ್ಣ ನಟಿಸಲಿದ್ದಾರೆ ಎಂದಾಗಲೇ, ದೊಡ್ಡ ಮಟ್ಟದ ಕುತೂಹಲ ವ್ಯಕ್ತವಾಗಿತ್ತು. ಅದು ನಿಜವಾಗುತ್ತಿದ್ದಂತೆ, ಅಭಿಮಾನಿಗಳ ವಲಯ ಸಂಭ್ರಮಿಸಿತ್ತು. ಹೀಗಿರುವಾಗಲೇ ಅದೇ ಕಾಲಿವುಡ್‌ ಅಂಗಳದಿಂದ ಮತ್ತೊಂದು ಸುದ್ದಿ ಹೊರಬಿದ್ದಿತ್ತು. ನಟ ರಜನಿಕಾಂತ್‌ ಅವರ ಮಾಜಿ ಅಳಿಯ ಧನುಷ್‌ ಚಿತ್ರದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ ಎಂದು. ಇದೀಗ ಆ ಸುದ್ದಿ ನಿಜವಾಗಿದೆ. ಸ್ವತಃ ಶಿವಣ್ಣ ಪೋಸ್ಟರ್‌ ಹಂಚ...