ಭಾರತ, ಫೆಬ್ರವರಿ 19 -- ಭಾರತ ದೇಶವು ಹಲವು ಮಹಾನ್ ಕಾಂತ್ರಿಕಾರಿ ನಾಯಕರು ಹಾಗೂ ರಾಜರನ್ನು ಹೊಂದಿತ್ತು. ಭಾರತ ಇತಿಹಾಸದಲ್ಲಿರುವ ಅಗ್ರಗಣ್ಯ ರಾಜರ ಹೆಸರಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಕೂಡ ಒಂದು. ಶಿವಾಜಿ ಮಹಾನ್ ತಂತ್ರಗಾರ, ಗೆರಿಲ್ಲಾ ತಂತ್ರಗಳ ಮೂಲಕ ವೈರಿಗಳನ್ನು ಸೆದೆ ಬಡಿಯುತ್ತಿದ್ದ ಧೀರ. ಪರ್ವತಗಳನ್ನೇ ತನ್ನ ಕೋಟೆಯನ್ನಾಗಿ ಮಾಡಿಕೊಂಡ ಶೂರ. ಮರಾಠ ನಾಯಕರಲ್ಲಿ ಶಿವಾಜಿ ಹೆಸರು ಎಂದಿಗೂ ಮೊದಲ ಸ್ಥಾನದಲ್ಲಿರುತ್ತದೆ.

ಕೆಚ್ಚೆದೆಯ ನಾಯಕನಾಗಿರುವ ಶಿವಾಜಿ ಹುಟ್ಟಿದ ದಿನವನ್ನು ಸ್ಮರಿಸುವ ಹಾಗೂ ಸಂಭ್ರಮಿಸುವ ಉದ್ದೇಶದಿಂದ ಪ್ರತಿವರ್ಷ ಫೆಬ್ರುವರಿ 19 ರಂದು ಶಿವಾಜಿ ಜಯಂತಿ ಆಚರಿಸಲಾಗುತ್ತದೆ. ಈ ಬಾರಿ ಶಿವಾಜಿಯ 395ನೇ ಜಯಂತಿ ನಡೆಯುತ್ತಿದೆ. ಶಿವಾಜಿ ಧೈರ್ಯ, ಶೌರ್ಯ ಹಾಗೂ ತಂತ್ರಗಳಿಗೆ ಹೆಸರುವಾಸಿಯಾದ ರಾಜ. ತನ್ನ ಕೌಶಲಗಳ ಮೂಲಕವೇ ವೈರಿಗಳನ್ನು ಸದೆಬಡಿಯುತ್ತಿದ್ದ ಪರಾಕ್ರಮಿ.

ಶಿವಾಜಿ ಜಯಂತಿಯಂದು ಭಾರತದಾದ್ಯಂತ ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಎಲ್ಲೆಲ್ಲೂ ಶಿವಾಜಿಯ ಚಿತ್ರಪಟಗಳು ಹಾರಾಡುತ್ತಿರುತ್ತವೆ. ಮೆರ...