Bengaluru, ಫೆಬ್ರವರಿ 24 -- ಡಾ. ರಾಜ್‌ಕುಮಾರ್‌ ಕುಟುಂಬದವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಸಮಯ ಸಿಕ್ಕಾಗಲೆಲ್ಲ, ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿರುತ್ತಾರೆ.

ಇದೀಗ ನಟ ಡಾ. ಶಿವರಾಜ್‌ಕುಮಾರ್ ತಮ್ಮ ಕುಟುಂಬದೊಂದಿಗೆ ಭಾನುವಾರ (ಫೆ. 23) ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.

ಭೇಟಿ ವೇಳೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಕುಟುಂಬಕ್ಕೆ ಅನುಗ್ರಹ ಫಲಮಂತ್ರಾಕ್ಷತೆ, ಶೇಷವಸ್ತ್ರ ಮತ್ತು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

ಶಿವರಾಜ್‌ಕುಮಾರ್‌ ಜತೆಗೆ ಪತ್ನಿ ಗೀತಾ ಶಿವರಾಜ್‌ಕುಮಾರ್‌, ಮಗಳು ನಿವೇದಿತಾ ಸಹ ಮಠಕ್ಕೆ ಆಗಮಿಸಿದ್ದರು.

ರಾಯರ ಬೃಂದಾವನಕ್ಕೆ ನಟ ಶಿವರಾಜ್‌ಕುಮಾರ್‌ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.

ಭೇಟಿ ವೇಳೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಅವರ ಕುಟುಂಬಕ್ಕೆ ಅನುಗ್ರಹ ಫಲಮಂತ್ರಾಕ್ಷತೆ, ಶೇಷವಸ್ತ್ರ ಮತ್ತು ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

ಭೇಟಿಯ ಸಮಯದಲ್ಲಿ, ಡಾ. ಶಿವರಾಜ್‌ಕುಮಾರ್...