Bangalore, ಫೆಬ್ರವರಿ 21 -- ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ, ನಿರ್ಮಾಪಕಿ, ಡ್ಯಾನ್ಸರ್‌, ಬರಹಗಾರ್ತಿ, ಮಾಡೆಲ್‌ ಮತ್ತು ಉದ್ಯಮಿ ಶಿಲ್ಪಾ ಶೆಟ್ಟಿ ಕರ್ನಾಟಕ ಮೂಲದವರು. ಕರ್ನಾಟಕದ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿರುವ ಶಿಲ್ಪಾ ಶೆಟ್ಟಿಯ ಫಿಟ್ನೆಸ್‌ ಮತ್ತು ಸೌಂದರ್ಯದ ಕುರಿತು ಸಾಕಷ್ಟು ಜನರಿಗೆ ಕುತೂಹಲ ಇದ್ದೇ ಇರುತ್ತದೆ. ವಿಶೇಷವಾಗಿ ಪ್ರತಿನಿತ್ಯ ಅವರ ಪ್ಲೇಟ್‌ನಲ್ಲಿ ಏನು ಇರುತ್ತದೆ? ಅವರ ಡಯೆಟ್‌ ಪ್ಲ್ಯಾನ್‌ ಏನು? ಎಷ್ಟು ವ್ಯಾಯಾಮ ಮಾಡ್ತಾರೆ, ಫಿಟ್ನೆಸ್‌ಗಾಗಿ ಏನೆಲ್ಲ ಕಸರತ್ತು ಮಾಡ್ತಾರೆ ಎಂಬ ಸಂದೇಹ ಇದ್ದೇ ಇರುತ್ತದೆ. 1993ರಲ್ಲಿ ಬಾಝಿಗಾರ್‌ ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ಈಗ 49 ವರ್ಷ. ಆದರೆ, ನೋಡಿದಾಗ ಹಾಗೆ ಅನಿಸದು. ಇವರು ಇಬ್ಬರು ಮಕ್ಕಳ ತಾಯಿಯೂ ಹೌದು. ಹರೆಯದ ನಟಿಯರನ್ನು ನಾಚಿಸುವಂತಹ ಸೌಂದರ್ಯ ಹೊಂದಿರುವ ಶಿಲ್ಪಾ ಶೆಟ್ಟಿಗೆ 2012ರಲ್ಲಿ ಮೊದಲ ಮಗುವಾಗಿತ್ತು. ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ 2020ರಲ್ಲಿ ಪಡೆದರು...