Kalburgi, ಮಾರ್ಚ್ 20 -- ಎರಡು ವಾರಗಳ ಕಾಲ ನಡೆಯುವ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆ ಎಂದು ಪ್ರಸಿದ್ದಿಯಾಗಿರುವ ಕಲಬುರಗಿ ಶರಣಬಸವೇಶ್ವರರ 203ನೇ ಮಹಾರಥೋತ್ಸವ ಬುಧವಾರ ಸಂಜೆ ನೆರವೇರಿತು

ಮೂರು ದಿನದ ಹಿಂದೆ ಆರಂಭಗೊಂಡಿರುವ ಕಲಬುರಗಿ ಶರಣಬಸವೇಶ್ವರ ಜಾತ್ರೆಯು 11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ದಿನದವರೆಗೂ ಜರುಗಲಿದೆ.

ರಥೋತ್ಸವ ಅಂಗವಾಗಿ ಕಲಬುರಗಿ ಶರಣ ಬಸವೇಶ್ವರ ದೇಗುಲದಲ್ಲಿ ಗುರು ಮರುಳಾರಾಧ್ಯರು ಹಾಗೂ ಶಿಷ್ಯ ಶರಣ ಬಸವೇಶ್ವರ ಗದ್ದುಗೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ರಥೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರದ ರಸ್ತೆಗಳೆಲ್ಲ ಶರಣಬಸವೇಶ್ವರ ದೇವಾಲಯಕ್ಕೆ ಸೇರುವಂತೆ ಭಕ್ತರು ಬಂದು ಸೇರುತ್ತಿದ್ದುದು ಕಂಡು ಬಂದಿತು.

ಈ ಬಾರಿಯೂ ಶರಣಬಸವೇಶ್ವರರ ಜಾತ್ರೆ ಅಂಗವಾಗಿ ರಥೋತ್ಸವವನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.

ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯ ರಸ್ತೆಗಳುದ್ದಕ್ಕೂ ವ್ಯಾಪಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇಗುಲವೂ ಕೂಡ ಬಗೆಬಗೆಯ ದೀಪಾಲಂಕಾರದಿಂದ ಗಮ...