ಭಾರತ, ಫೆಬ್ರವರಿ 20 -- ವೈದಿಕ ಜ್ಯೋತಿಷ್ಯದಲ್ಲಿ ಕರ್ಮಫಲದಾತನಾದ ಶನಿಗೆ ವಿಶೇಷ ಮಹತ್ವ ನೀಡಲಾಗಿದೆ. ಶನಿಯು ಕೆಟ್ಟ ಗ್ರಹಗಳ ಸಾಲಿಗೆ ಸೇರಿದರೂ, ಶನಿ ಅನುಗ್ರಹವಿದ್ದರೆ ಬದುಕಿನಲ್ಲಿ ಪವಾಡಗಳೇ ನಡೆಯಬಹುದು. ಇದೀಗ ಫೆಬ್ರವರಿ 28 ರಂದು ಶನಿಯು ತನ್ನದೇ ಆದ ರಾಶಿಯಾದ ಕುಂಭ ರಾಶಿಯಲ್ಲಿ ಅಸ್ತಮಿಸುತ್ತಾನೆ. ಮಾರ್ಚ್ 29 ರಂದು ಶನಿಯು ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ.

ಶನಿಯ ಸ್ಥಾನಪಲ್ಲಟವು ಅನೇಕ ರಾಶಿಯವರ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರ ಅದೃಷ್ಟ ಸುಧಾರಿಸಲು ಕಾರಣವಾಗುತ್ತದೆ. ಶನಿಯ ಪ್ರಭಾವದಿಂದಾಗಿ, ಕೆಲವು ಜನರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಯಿದೆ. ಹಾಗಾದರೆ ಶನಿಯ ಆಶೀರ್ವಾದದಿಂದ ಯಾವೆಲ್ಲಾ ರಾಶಿಗೆ ಶುಭವಾಗಲಿದೆ, ಯಾವ ರಾಶಿಯವರ ದುರಾದೃಷ್ಟ ಕಳೆದು ಶುಭದಿನಗಳು ಎದುರಾಗಲಿವೆ ನೋಡಿ.

ಫೆಬ್ರವರಿಯಲ್ಲಿ ಅಸ್ತಮಾನನಾಗುವ ಮತ್ತು ಮಾರ್ಚ್‌ನಲ್ಲಿ ಉದಯಿಸಲಿರುವ ಶನಿ ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತರುತ್ತಾನೆ. ಇದು ಆರ್ಥಿಕ ಬೆಳವಣಿಗೆಗೆ ಅವಕಾಶವನ...