ಭಾರತ, ಮಾರ್ಚ್ 17 -- ಶನಿಯ ರಾಶಿ ಬದಲಾವಣೆ ಮತ್ತು ಸೂರ್ಯಗ್ರಹಣ ಒಂದೇ ದಿನ ಸಂಭವಿಸುತ್ತಿದೆ. ಈ ದಿನ ಶನಿ ಗ್ರಹವು ಮೀನ ರಾಶಿಗೆ ಪ್ರವೇಶ ಮಾಡುತ್ತಿದೆ. ಶನಿ ಸಂಚಾರದಿಂದ ಕೆಲವರಿಗೆ ಕೇಡಾಗುವ ಸಾಧ್ಯತೆ ಇರುವ ಕಾರಣ ಎಚ್ಚರದಿಂದಿರುವುದು ಅವಶ್ಯ. ಮನುಷ್ಯನ ಕರ್ಮಫಲಗಳಿಗೆ ಅನುಗುಣವಾಗಿ ಶನಿಯು ಫಲಾಫಲಗಳನ್ನು ನೀಡುತ್ತಾನೆ. ಇದರಿಂದ ನಾವು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ಶನಿ ಸಂಚಾರ ಹಾಗೂ ಸೂರ್ಯಗ್ರಹಣದಿಂದ ಯಾವ ರಾಶಿಯವರ ಬಾಳಿನಲ್ಲಿ ಬದಲಾವಣೆಗಳು ಉಂಟಾಗಲಿವೆ ನೋಡಿ.

ವೃಷಭ ರಾಶಿಯವರ ಜೀವನದಲ್ಲಿ, ಶನಿಯು ದೀರ್ಘಕಾಲೀನ ಗುರಿಗಳು ಮತ್ತು ಸ್ನೇಹವನ್ನು ಪರಿಶೀಲಿಸುತ್ತಾನೆ. ಈ ಸಮಯದಲ್ಲಿ ಶನಿ ಸಹಾಯದಿಂದ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ತಿಳಿದುಕೊಳ್ಳಬಹುದು. ಅವರು ನಿಜವಾಗಿಯೂ ನಿಮ್ಮ ಬೆಳವಣಿಗೆಯನ್ನು ನೋಡಲು ಬಯಸುತ್ತಾರೆಯೇ ಅಥವಾ ಸ್ವಾರ್ಥವೇ ಎಂದು ನಿಮಗೆ ತಿಳಿಸುತ್ತಾನೆ. ಜೀವನದಲ್ಲಿ ಯಾವ ಸಂಬಂಧಗಳಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಜೀವನ...