ಭಾರತ, ಮಾರ್ಚ್ 20 -- ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನದಂದು ತರ್ಪಣ ಬಿಡುವುದು ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಮಾವಾಸ್ಯೆಗಳಲ್ಲಿ ಶನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಶನಿದೇವನ ಅನುಗ್ರಹ ಪಡೆಯಲು ಈ ದಿನ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು.

ಈ ವರ್ಷ ಮಾರ್ಚ್ 29 ಶನಿವಾರ ಶನಿ ಅಮಾವಾಸ್ಯೆ ಬರುತ್ತದೆ. ಇದು ಚೈತ್ರ ಮಾಸದ ಅಮಾವಾಸ್ಯೆಯ ದಿನ. ಶನಿವಾರ ಬರುವ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶನಿಯ ಆಶೀರ್ವಾದ ಪಡೆಯಲು ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯದ ಪ್ರಕಾರ ಯಾರ ಜಾತಕದಲ್ಲಿ ಶನಿಯ ಶನಿದೋಷವಿರುತ್ತದೋ ಅಂಥವರು ಈ ದಿನದಂದು ಕೆಲವು ವಿಶೇಷ ಪರಿಹಾರ ಕ್ರಮಗಳನ್ನು ಪಾಲಿಸಬೇಕು. ಹೀಗೆ ಮಾಡುವುದರಿಂದ ಶನಿಯ ದುಷ್ಪರಿಣಾಮಗಳಿಂದ ಮುಕ್ತಿ ಸಿಗುತ್ತದೆ ಮತ್ತು ಅದರ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಶನಿಯ ಅಮಾವಾಸ್ಯೆಯಂದು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂ...