ಭಾರತ, ಏಪ್ರಿಲ್ 2 -- ಶಾಲಿನಿ ಪಾಂಡೆ ಈಗ ತನ್ನ ನಟನೆಯಿಂದ ಸಿನಿಮಾ ಪ್ರಿಯರ ಗಮನ ಸೆಳೆಯುತ್ತಿದ್ದಾರೆ. ಇವರು ಮಹಾರಾಜ್‌ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ಕ್ರೈಮ್‌ ಡ್ರಾಮಾ ಡಬ್ಬಾ ಕಾರ್ಟೆಲ್‌ನಲ್ಲಿ ನಟಿಸಿದ್ದರು. ಥಾಣೆಯ ಐವರು ಸಾಮಾನ್ಯ ಮಹಿಳೆಯರು ಡ್ರಗ್‌ ಜಾಲದಲ್ಲಿ ಸಿಲುಕುವಂತಹ ಕಥೆಯನ್ನು ಡಬ್ಬಾ ಕಾರ್ಟೆಲ್‌ ಹೊಂದಿದೆ. ಈ ಐವರು ಮಹಿಳೆಯರು ಟಿಫಿನ್‌ ಸರ್ವೀಸ್‌ ಮಾಡುತ್ತಿದ್ದರು. ಈ ಸರಣಿಯಲ್ಲಿ ಶಾಲಿನಿಯ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಶಾಲಿನಿ ತನ್ನ ಕರಿಯರ್‌ನ ಆರಂಭದ ದಿನಗಳಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಆ ಸಮಯದಲ್ಲಿ ಈಕೆ ಇದ್ದ ವ್ಯಾನ್‌ಗೆ ಈಕೆಯ ಅನುಮತಿ ಇಲ್ಲದೆ ನಿರ್ದೇಶಕನೊಬ್ಬ ನುಗ್ಗಿದ ಸಂದರ್ಭವನ್ನು ತಿಳಿಸಿದ್ದಾರೆ. ಆಗ ಆಕೆ ಆ ವ್ಯಾನಿಟಿ ವ್ಯಾನ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದರಂತೆ.

ಫಿಲ್ಮಿಗ್ಯಾನ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಶಾಲಿನಿ ಪಾಂಡೇ ನಿರ್ದೇಶಕರೊಬ್ಬರು ಮ್ಯಾನರ್ಸ್‌ ಇಲ್ಲದೆ ವರ್ತಿಸಿರು...