ಭಾರತ, ಜೂನ್ 2 -- ಪ್ರತಿವರ್ಷ ಜೂನ್‌ 2 ರಂದು ಅಂತರರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರ ಮೇಲೆ ನಡೆಯುವ ದೌರ್ಜನ್ಯ, ಅವರ ಅಸಹಾಯಕತೆ, ಅವರ ಪರಿಸ್ಥಿತಿಯನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ಎದುರಿಸುವ ಸಮಸ್ಯೆಗಳು, ಜನರ ಅವರನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳುತ್ತಾರೆ, ಈ ವೃತ್ತಿಗೆ ಬರಲು ಕಾರಣ, ಜನರನ್ನು ಅವರನ್ನು ಯಾವ ರೀತಿ ಬಲಿಪಶು ಮಾಡುತ್ತಾರೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.

ಜೂನ್‌ 2, 1975 ಸುಮಾರು 100ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಫ್ರಾನ್ಸ್‌ನ ಲಿಯಾನ್‌ನಲ್ಲಿ ಸೇಂಟ್‌ ನಿಜಿಯರ್‌ ಚರ್ಚ್‌ನಲ್ಲಿ ಒಟ್ಟುಗೂಡುತ್ತಾರೆ. ಅವರೆಲ್ಲರೂ ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣಗಳು ಹಾಗೂ ತಮ್ಮ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ಆಕ್ರೋಶ, ಹತಾಶೆ ಹಾಗೂ ಕ್ರೋಧವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ ಇವರೆಲ್ಲರೂ ʼನಮ್ಮ ಮಕ್ಕಳು ನಾವು ಜೈಲಿಗೆ ಹೋಗುವು...