Bengaluru, ಮಾರ್ಚ್ 1 -- ಇಂದಿನ ವೇಗದ ಜಗತ್ತಿನಲ್ಲಿ, ವೈಯಕ್ತಿಕ ಆರೈಕೆಗೆ ಗಮನ ಕೊಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಕೆಲವೊಂದು ಪ್ರಮುಖ ದೈನಂದಿನ ಕೆಲಸಗಳನ್ನು ಬಿಟ್ಟರೆ ದೇಹ ಮತ್ತು ಮನಸ್ಸಿನ ಸಂಪೂರ್ಣ ಕಾಳಜಿ ವಹಿಸುವವರ ಸಂಖ್ಯೆ ಬಹಳ ಕಡಿಮೆ. ನಿಮಗೆ ಗೊತ್ತಾ, ವೈಯಕ್ತಿಕ ಕಾಳಜಿಗೆ ಸಮಯ ನೀಡುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಅದ್ಭುತ ವಿಧಾನವಾಗಿದೆ. ವೈಯಕ್ತಿಕ ಕಾಳಜಿಯು ತ್ವಚೆಯ ಆರೈಕೆ ಮತ್ತು ನೈರ್ಮಲ್ಯದಿಂದ ಹಿಡಿದು ಮಾನಸಿಕ ಸ್ವಾಸ್ಥ್ಯ ಮತ್ತು ಸ್ವಯಂ-ಆರೈಕೆಗಳನ್ನು ಒಳಗೊಂಡಿದೆ. ಈ ಅಂಶಗಳಿಗೆ ಆದ್ಯತೆ ನೀಡುವುದರಿಂದ ಆತ್ಮವಿಶ್ವಾಸ ಸುಧಾರಿಸುವುದಲ್ಲದೆ, ಒತ್ತಡ ಕಡಿಮೆಯಾಗಿ ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.

ತ್ವಚೆಯ ಆರೈಕೆ ಮತ್ತು ನೈರ್ಮಲ್ಯ: ಹೆಚ್ಚಿನ ರೋಗಗಳು ದೇಹವನ್ನು ಬಾಧಿಸುವುದೇ ಸೋಂಕುಗಳಿಂದ. ಇವುಗಳನ್ನು ತಡೆಗಟ್ಟಲು ಮತ್ತು ಯಾವತ್ತೂ ದೈಹಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಪ್ರತಿನಿತ್ಯ ಸ್ನಾನ, ತ್ವಚೆಗೆ ಅಗತ್ಯವಿರುವ ಮಾಯಿಶ್ಚರೈಸರ್ ಮ...