Bengaluru, ಜನವರಿ 31 -- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಹೇಗಾದರೂ ಮಾಡಿ ಸೀತಾಳನ್ನು ಮೊದಲಿನಂತೆ ಮಾಡಬೇಕು ಅನ್ನೋ ಹಠಕ್ಕೆ ಬಿದ್ದ ರಾಮ, ಸಿಹಿಯನ್ನೇ ಹೋಲುವ ಹುಡುಗಿಯ ಹುಡುಕಾಟದಲ್ಲಿದ್ದಾನೆ. ಅದಕ್ಕಾಗಿ, ಸುಳ್ಳು ಸೀರಿಯಲ್‌ ಆಡಿಷನ್‌ ಕರೆದಿದ್ದಾನೆ. ಇತ್ತ ಆಡಿಷನ್‌ಗೆ ಹೋಗೋಕೆ ಹಿಂದೇಟು ಹಾಕಿದ ಸುಬ್ಬಿಗೆ ಸಿಹಿಯೇ ಒತ್ತಾಯ ಮಾಡಿದ್ದಾಳೆ. ಮನವೊಲಿಸಿದ್ದಾಳೆ. ಸೀತಮ್ಮನ ಸಲುವಾಗಿಯಾದರೂ ಹೋಗು ಎಂದಿದ್ದಾಳೆ. ಹ್ಞೂಂ ಎಂದ ಸುಬ್ಬಿ, ಕೊನೇ ಕ್ಷಣದಲ್ಲಿ ಆಡಿಷನ್‌ಗೆ ತೆರಳಿದ್ದಾಳೆ. ಇನ್ನೇನು ಆ ಹುಡುಗಿ ಬರಲ್ಲ ಎಂದುಕೊಂಡಿದ್ದ ಶ್ರೀರಾಮ ಮತ್ತು ಅಶೋಕನಿಗೆ ಸುಬ್ಬಿಯ ಆಗಮನ ಅಚ್ಚರಿತಂದಿದೆ.

ಸುಬ್ಬಿ ಬರಲ್ಲ ಎಂದುಕೊಂಡಿದ್ದ ಶ್ರೀರಾಮ್‌ ಮತ್ತು ಅಶೋಕ, ಅದೇ ಸುಬ್ಬಿಯನ್ನು ನೋಡಿ ಸ್ಟನ್‌ ಆಗಿದ್ದಾರೆ. ಸುಬ್ಬಿಯನ್ನು ನೋಡಿದಾಗ ರಾಮನ ಕಣ್ಣಿಗೆ ತನ್ನ ಪುಟಾಣಿ ಸಿಹಿಯೇ ಕಂಡಿದ್ದಾಳೆ. ರಾಮನ ಮೊಗದಲ್ಲಿ ಬಹುದಿನಗಳ ಬಳಿಕ ನಗು ಮೂಡಿದೆ. "ಇವಳು ನೋಡೋದಕ್ಕೆ ಸೇಮ್‌ ಟು ಸೇಮ್‌ ಸಿಹಿಯಂತಿದ್ದಾಳಲ್ಲ. ಬಹುಶಃ ಆ ದೇವರೇ ನಮ್ಮ...