Bengaluru, ಮಾರ್ಚ್ 8 -- Seetha Rama Serial: ಕನ್ನಡ ಕಿರುತೆರೆಯಲ್ಲಿ ಈಗಾಗಲೇ 400 ಪ್ಲಸ್‌ ಏಪಿಸೋಡ್‌ಗಳನ್ನು ಮುಗಿಸಿಕೊಂಡು, 500 ಸಂಚಿಕೆಗಳತ್ತ ಸಾಗುತ್ತಿದೆ ಸೀತಾ ರಾಮ ಧಾರಾವಾಹಿ. ಸಿಹಿ ಅಕಾಲಿಕ ಸಾವಿನ ಬಳಿಕ ರೋಚಕ ಟ್ವಿಸ್ಟ್‌ಗಳೊಂದಿಗೆ ನೋಡುಗರನ್ನು ಸೆಳೆದ ಈ ಸೀರಿಯಲ್‌ನಲ್ಲೀಗ ಸುಬ್ಬಿಯ ಆಗಮನವಾಗಿದೆ. ಇತ್ತೀಚೆಗಷ್ಟೇ ತನ್ನ ಪ್ರಸಾರ ಸಮಯವನ್ನು ಬದಲು ಮಾಡಿಕೊಂಡು, ವೀಕ್ಷಕರಿಗೆ ಬೇಸರ‌ ಮೂಡಿಸಿತ್ತು. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತಿದ್ದ ಈ ಸೀರಿಯಲ್‌ ಸದ್ಯ ಸಂಜೆ 5:30ಕ್ಕೆ ಪ್ರಸಾರವಾಗುತ್ತಿದೆ. ಕನ್ನಡಿಗರಿಂದ ಮೆಚ್ಚುಗೆ ಪಡೆದ ಇದೇ ಸೀರಿಯಲ್‌, ಇದೀಗ ಪರಭಾಷೆಗೆ ಡಬ್‌ ಆಗಿ, ಅಲ್ಲಿನ ವೀಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

ಹೌದು, ಕನ್ನಡದ ಸೀರಿಯಲ್‌ಗಳು ಪರಭಾಷೆಗೆ ಡಬ್‌ ಆಗುವುದು ತೀರಾ ಕಡಿಮೆ. ಮೇಕಿಂಗ್‌ ಮತ್ತು ಗುಣಮಟ್ಟದ ಮಾನದಂಡದ ಮೇಲೆ ಅಲ್ಲೊಂದು ಇಲ್ಲೊಂದು ಸೀರಿಯಲ್‌ಗಳು ಬೇರೆ ಭಾಷೆಗಳಲ್ಲಿ ಡಬ್‌ ಆದ ಉದಾಹರಣೆಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡದ ಸೀರ...