Bengaluru, ಫೆಬ್ರವರಿ 13 -- Seetha Rama February today Episode: ಸೀತಾ ರಾಮ ಸೀರಿಯಲ್‌ ತನ್ನ ಪ್ರಸಾರದ ಸಮಯ ಬದಲಿಸಿದರೂ, ನೋಡುಗರನ್ನು ಸೆಳೆಯುತ್ತಿದೆ. ಅದಕ್ಕೆ ಕಾರಣ; ಧಾರಾವಾಹಿಯಲ್ಲಾದ ಇತ್ತೀಚಿನ ಬೆಳವಣಿಗೆಗಳು. ಅಂದರೆ, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದ ಸೀತಾಗೆ ಸಿಹಿನೇ ಎಲ್ಲ. ಸಿಹಿ ಇಲ್ಲ ಅನ್ನೋ ಕಲ್ಪನೆಯೇ ಆಕೆಗಿಲ್ಲ. ಈ ನಡುವೆ, ಹೇಗಾದರೂ ಮಾಡಿ ಸೀತಾಳನ್ನು ಮೊದಲಿನಂತೆ ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ರಾಮ್‌ ಮತ್ತು ಅಶೋಕ್‌ ಶತಾಯಗತಾಯ ಹೋರಾಡುತ್ತಿದ್ದರು. ಆಗ ಅವರಿಗೆ ಸಿಕ್ಕವಳೇ ಥೇಟ್‌ ಸಿಹಿಯನ್ನೇ ಹೋಲುವ ಸುಬ್ಬಿ. ಇದೀಗ ಇದೇ ಸುಬ್ಬಿ ಸಿಹಿಯ ಪೋಷಾಕಿನಲ್ಲಿ ದೇಸಾಯಿ ಮನೆಯನ್ನು ಪ್ರವೇಶಿಸಿದ್ದಾಳೆ.

ಮನೆಯಲ್ಲಿ ಸಿಹಿ ಇಲ್ಲ ಅನ್ನೋ ಸತ್ಯವನ್ನು ಭಾರ್ಗವಿ ಸೀತಾಳ ಮುಂದೆ ಹೇಳಿದ್ದಾಳೆ. ಆವತ್ತೇ ನಿನ್ನ ಮಗಳು ಸತ್ತಿದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದಿದ್ದ ಭಾರ್ಗವಿ ಕುತ್ತಿಗೆಗೆ ಚಾಕು ಹಿಡಿದಿದ್ದಳು ಸೀತಾ. ಸೀತಾಳ ಹುಚ್ಚು ವರ್ತನೆಗೆ ಹುಚ್ಚಾಸ್ಪತ್ರೆಗೂ ದಾಖಲಿಸುವ ನಿರ್ಧಾರಕ್ಕೆ ಬಂದಿದ...