Bengaluru, ಮಾರ್ಚ್ 12 -- ಸೀತಾ ರಾಮ ಧಾರಾವಾಹಿಯಲ್ಲಿ ಸುಬ್ಬಿಯ ನಿಜಬಣ್ಣವನ್ನು ಬಯಲಿಗೆಳೆಯುತ್ತಿದ್ದಾಳೆ ಭಾರ್ಗವಿ. ಸುಬ್ಬಿ ಮೇಲೆ ಒಂದಾದ ಮೇಲೊಂದು ಪ್ರಯೋಗ ಮಾಡುತ್ತಿರುವ ಭಾರ್ಗವಿಗೆ, ಇದೀಗ ಮತ್ತೊಂದು ಸುಳಿವು ಸಿಕ್ಕಿದೆ. ದೇಸಾಯಿ ಮನೆಗೆ ಸುಬ್ಬಿಯ ಹಳೇ ಗ್ಯಾಂಗ್‌ ಎಂಟ್ರಿಕೊಟ್ಟಿದೆ. ಈ ವಿಚಾರ ರಾಮ್‌- ಅಶೋಕನಿಗೂ ಗೊತ್ತಾಗಿದೆ.

ಸುಬ್ಬಿಯ ವಿಚಾರಕ್ಕೆ ದೇಸಾಯಿ ಮನೆ ಚೆಲ್ಲಾಪಿಲ್ಲಿಯಾಗಿದೆ. "ಅಪ್ಪು.. ಮನೆಯನ್ನ ಹೇಗೆ ಮಾಡಿಟ್ಟಿದ್ದಾಳೆ ನೋಡು. ಇವಳೊಬ್ಬಳೇ ಇಷ್ಟೆಲ್ಲ ಮಾಡಿರೋಕೆ ಸಾಧ್ಯವೇ ಇಲ್ಲ ಎಂದು ಸುಬ್ಬಿಯತ್ತ ಬೆರಳು ಮಾಡಿದ್ದಾಳೆ ಭಾರ್ಗವಿ.

ಪುಟ್ಟ ಇದನ್ನ ನಾನು ಕ್ಲೀನ್‌ ಮಾಡಿಸ್ತಿನಿ ಎಂದು ಸಿಹಿಗೆ ರಾಮ್ ಹೇಳಿದರೆ, ಕ್ಲೀನ್‌ ಮಾಡಿಸೋದು ದೊಡ್ಡ ವಿಷ್ಯಾ ಅಲ್ಲ ಅಪ್ಪು ಎಂದು ರಾಮನ ಮೇಲೆ ಗರಂ ಆಗಿದ್ದಾಳೆ ಭಾರ್ಗವಿ.

ಇವಳ ಜತೆಗೆ ಇನ್ಯಾರೋ ಇರಬೇಕು. ಹಾಗಾಗಿ ಇಷ್ಟೆಲ್ಲ ಮಾಡ್ತಿದ್ದಾಳೆ. ಇವಳು ಯಾಕೆ ಈ ರೀತಿ ವರ್ತಿಸ್ತಿದ್ದಾಳೆ ಅನ್ನೋದು ವಿಷ್ಯಾ ಎಂದೂ ಭಾರ್ಗವಿ ಹೇಳಿದ್ದಾಳೆ.

ಇತ್ತ ಸಿಹಿ ಭಾರ್ಗವಿಯ ಮಾತಿಗೆ ಹೆ...