Bengaluru, ಫೆಬ್ರವರಿ 6 -- Seetha Rama Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ರ ಪ್ರೈಂ ಟೈಮ್‌ ಸ್ಲಾಟ್‌ಗೆ ಪ್ರಸಾರ ಕಾಣುತ್ತಿದ್ದ ಸೀತಾ ರಾಮ ಸೀರಿಯಲ್‌, ವೀಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ. ಆದರೆ, ಈಗ ಇದೇ ಸೀರಿಯಲ್‌ ಸಂಜೆ 5:30ಕ್ಕೆ ಪ್ರಸಾರ ಕಾಣುತ್ತಿದೆ. 400ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿರುವ, ಈ ಸೀರಿಯಲ್‌ ಸದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಸಿಹಿ ಜಾಗಕ್ಕೆ ಸುಬ್ಬಿಯ ಆಗಮನವಾಗಿದೆ. ಅಂತೂ ಇಂತೂ ಸುಬ್ಬಿಯ ಮನವೊಲಿಸಿ, ಸಿಹಿಯ ರೂಪ ನೀಡಲಾಗಿದೆ. ಇನ್ನೇನು ಸೀತಾ ಬಾಳಿಗೂ ಸಿಹಿಯಾಗಿ ಸುಬ್ಬಿಯ ಪ್ರವೇಶವಾಗಲಿದೆ.

ಇಂತಿಪ್ಪ ಹಾದಿಯಲ್ಲಿ ಸಾಗುತ್ತಿರುವ ಸೀತಾ ರಾಮ ಸೀರಿಯಲ್‌, ಕಳೆದ ವಾರದಿಂದ 9:30ರ ಬದಲಿಗೆ ಸಂಜೆ 5:30ಕ್ಕೆ ಪ್ರಸಾರ ಕಾಣುತ್ತಿದೆ. ಇತ್ತ 9:30ಕ್ಕೆ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ ಪ್ರಸಾರ ಕಾಣುತ್ತಿದೆ. ವಾಹಿನಿಯ ಈ ನಿರ್ಧಾರಕ್ಕೆ ವೀಕ್ಷಕರೂ ಕೊಂಚ ಬೇಸರ ಹೊರಹಾಕಿದ್ದರು. ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿದ್ದ ಸೀರಿಯಲ್‌ಅನ್ನು ಬದಲಿಸಿದ್ದಕ್ಕೆ ವಾ...