Bengaluru, ಫೆಬ್ರವರಿ 25 -- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಕುಂಭಮೇಳದ ಸಂಚಿಕೆಗಳು ಶಿವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ವೀಕ್ಷಕರನ್ನು ರಂಜಿಸಲಿವೆ. ಅಂದರೆ, ಕನ್ನಡ ಕಿರುತೆರೆಯಲ್ಲಿ ಯಾರೂ ಮಾಡದ ಕುಂಭಮೇಳದ ಮಹಾಪ್ರಯೋಗವನ್ನು ಜೀ ಕನ್ನಡ ವಾಹಿನಿ ಮಾಡಿದೆ. ಮುಂದಿನ ಮೂರು ದಿನಗಳ ಕಾಲ ಸೀತಾ ರಾಮ ಸೀರಿಯಲ್‌ನಲ್ಲಿ ತ್ರಿವೇಣಿ ಸಂಗಮದ ಸಂಚಿಕೆಗಳು ಪ್ರಸಾರವಾಗಲಿವೆ. ಅದರಂತೆ ಇದೀಗ ಪ್ರೋಮೋ ಬಿಡುಗಡೆ ಆಗಿದ್ದು, ವೀಕ್ಷಕರ ಕಣ್ಣರಳಿಸಿದೆ.‌

ಕನ್ನಡ ಕಿರುತೆರೆ ಇದೀಗ ಮೊದಲಿನಂತಿಲ್ಲ. ಸಿನಿಮಾವನ್ನೂ ಮೀರಿಸುವ ಲೆವೆಲ್‌ಗೆ ಧಾರಾವಾಹಿಗಳು ಶೂಟಿಂಗ್‌ ಮಾಡಿಕೊಳ್ಳುತ್ತಿವೆ. ವಿದೇಶಗಳಲ್ಲಿಯೂ ಚಿತ್ರೀಕರಣ ಮಾಡಿಕೊಂಡ ಎಷ್ಟೋ ಉದಾಹರಣೆಗಳಿವೆ. ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಲಾಗಿದೆ. ಅದರಂತೆ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕನ್ಯಾದಾನ ಸೀರಿಯಲ್‌ ತಂಡ ಆ ಪುಣ್ಯಸ್ಥಳಕ್ಕೆ ಹೋಗಿ ಶೂಟಿಂಗ್‌ ನಡೆಸಿ ವಿಶೇಷ ಸಂಚಿಕೆಗಳನ್ನು ಪ್ರಸಾರಮಾಡಿತ್ತು. ಇದೀಗ ಸೀತಾ ರಾಮ ಸೀರಿಯಲ್‌ ಬಳಗ ಕುಂಭಮೇಳದ...