ಭಾರತ, ಮಾರ್ಚ್ 3 -- ಸೀತಾ ರಾಮ ಧಾರಾವಾಹಿ ವೀಕ್ಷಕರನ್ನು ಬಗೆಬಗೆ ಟ್ವಿಸ್ಟ್‌ ಮೂಲಕ ನೋಡಿಸಿಕೊಂಡು ಹೋಗುತ್ತಿದೆ. ಕುಂಭಮೇಳದಲ್ಲಿ ಮಿಂದು ಮನೆಗೆ ಮರಳಿದ ಬಳಿಕ, ಸೀತಾಗೆ ಸಿಹಿ ಮೇಲೆ ಹಲವು ಅನುಮಾನಗಳು ಮೂಡುತ್ತಿವೆ.

ರಾತ್ರಿ ರಾಮ, ಸೀತಾ ಮತ್ತು ಸಿಹಿ ಒಟ್ಟಿಗೆ ಮಲಗಿದ್ದಾರೆ. ಆದರೆ, ಬೆಳಗಾಗುವದರಲ್ಲಿ ಬೆಡ್‌ ಮೇಲೆ ಸಿಹಿ ಕಾಣಿಸುತ್ತಿಲ್ಲ. ಸೀತಮ್ಮನಿಗೂ ಇದು ಕೊಂಚ ಆತಂಕ ಮೂಡಿಸಿದೆ.

ಸಿಹಿ ಎಲ್ಲೋದಳು,. ಕಾಣಿಸ್ತಿಲ್ಲ ಎಂದು ಗಾಬರಿಯಲ್ಲಿ ರಾಮನನ್ನು ಎಬ್ಬಿಸಿ ರೂಮ್‌ನಿಂದ ಹೊರಬಂದಿದ್ದಾಳೆ ಸೀತಾ.

ಅಷ್ಟೊತ್ತಿಗೆ ಮನೆಯ ಹಾಲ್‌ನ ಮೇಲೆ ಸಿಹಿ ಮಲಗಿದ್ದಾಳೆ. ಇಲ್ನೋಡಿ ರಾಮ್‌, ಹೊರಗಡೆ ಬಂದು ಮಲಗಿದ್ದಾಳೆ ಎಂದಿದ್ದಾಳೆ ಸೀತಾ.

ಇವಳ್ಯಾಕೆ ಹೀಗೆ ಇಲ್ಲಿ ಬಂದು ಮಲಗಿದ್ದಾಳೆ ಎಂದು ಭಾರ್ಗವಿ ರಾಮ್‌ ಮತ್ತು ಸೀತಾಗೆ ಪ್ರಶ್ನೆ ಮಾಡಿದ್ದಾಳೆ.

ಇವಳು ಯಾವತ್ತೂ ಈ ಥರ ಮಾಡಿದವಳಲ್ಲ, ಈಗ ಹೀಗ್ಯಾಕೆ ಮಾಡ್ತಿದ್ದಾಳೋ ನನಗೂ ಗೊತ್ತಿಲ್ಲ ಎಂದು ಭಾರ್ಗವಿಗೆ ಹೇಳಿದ್ದಾಳೆ ಸೀತಾ.

ಸೀತಾಳ ಈ ಮಾತು, ಭಾರ್ಗವಿಗೂ ತನ್ನ ಅನುಮಾನ ನಿಜವಾಗ್ತಿದೆ ಎಂ...