Bengaluru, ಮಾರ್ಚ್ 21 -- Seetha Rama Serial: ಒಂದು ಕಾಲದಲ್ಲಿ ಜೀ ಕನ್ನಡ ವಾಹಿನಿಯಲ್ಲಿನ ಸೀತಾ ರಾಮ ಸೀರಿಯಲ್ ಎಂದರೆ ಎಲ್ಲರಿಗೂ ಇಷ್ಟ. ನವಿರು ಪ್ರೇಮಕಥೆಯ ಈ ಸೀರಿಯಲ್ ಸೊಗಸು ನಿರೂಪಣೆಯಿಂದಲೇ ನಾಡಿನ ಮನೆ ಮನಗಳಿಗೆ ಇಷ್ಟವಾಗಿತ್ತು. ಆದರೆ, ಈಗ ಅದ್ಯಾಕೋ ಹಳಿ ತಪ್ಪಿದೆ ಎಂದೆನಿಸುತ್ತಿದೆ. ಹಳೇ ಲಯಕ್ಕೆ ಮರಳದ ಸೀತಾ ರಾಮ ಸೀರಿಯಲ್, ಸಮಯ ಬದಲಾವಣೆಯಿಂದ ಟಿಆರ್‌ಪಿಯಲ್ಲಿಯೂ ಮೇಲಕ್ಕೆ ಏಳಲು ಹೆಣಗಾಡುತ್ತಿದೆ. ಕಥೆ ಸಾಗುವ ಪರಿ ನೋಡಿದ ವೀಕ್ಷಕ, ಆದಷ್ಟು ಬೇಗ ಮುಗಿಸಿ ಎಂದು ಮನವಿ ಸಹ ಮಾಡಿದ್ದುಂಟು. ಈಗ ಮತ್ತೆ ಅದೇ ಬೇಸರ ಮುಂದುವರಿದಿದೆ.
ಸೀತಾ ರಾಮ ಸೀರಿಯಲ್ ಇದೀಗ ಶೀರ್ಷಿಕೆಗೆ ತಕ್ಕಂತೆ ಸಾಗುತ್ತಿಲ್ಲ. ಅಂದರೆ ಈ ಧಾರಾವಾಹಿಯ ಮುಖ್ಯ ಪಾತ್ರಗಳಾದ ಸೀತಾ ಮತ್ತು ರಾಮ ಕೇವಲ ಪೋಷಕ ಕಲಾವಿದರಂತೆ ಕಾಣುತ್ತಿದ್ದಾರೆ. ಸಿಹಿ ಸುಬ್ಬಿಯ ಹಿನ್ನೆಲೆಯಲ್ಲಿಯೇ ಇಡೀ ಧಾರಾವಾಹಿ ಸಾಗುತ್ತಿದೆ. ಈ ಬದಲಾವಣೆಯೂ ವೀಕ್ಷಕರಿಗೆ ಬೇಸರ ತರಿಸಿದೆ. ಪ್ರೇಕ್ಷಕ ಬಯಸುವ ಕಂಟೆಂಟ್ ನೀಡುವಲ್ಲಿ, ಈ ಸೀರಿಯಲ್‌ನ ಬರಹಗಾರರು ಮತ್ತು ನಿರ್ದೇಶಕರು ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.