Bangalore, ಮಾರ್ಚ್ 28 -- Scorpion Bite Treatment: ಬೇಸಿಗೆ ಬಂತು. ಚೇಳುಗಳ ಸಂಚಾರ ಹೆಚ್ಚುತ್ತದೆ. ಚೇಳುಗಳು ಇವು ಜೇಡದಂತ ಕೀಟಗಳ ಜಾತಿಗೆ ಸೇರುತ್ತವೆ. ಇವುಗಳ ಗಾತ್ರ 2 ಸೆಂಟಿಮೀಟರಿನಿಂದ ಹಿಡಿದು 3.3 ಮೀಟರ್ ವರೆಗೆ ಇರುತ್ತವೆ. ಇವುಗಳಿಗೆ 4 ಜೊತೆ ಕಾಲುಗಳು, ತಲೆ, ಕುಟುಕು ಅಂಗ ಮತ್ತು ಶರೀರ ಇರುತ್ತದೆ.ಇವು ಅಕಶೇರುಕಗಳಾಗಿದ್ದು ಶರೀರವನ್ನು ರಕ್ಷಿಸಲು ಕವಚ ಹೊಂದಿರುವ ಬಹು ಕಾಲಿನ ಪ್ರಾಣಿಗಳಾಗಿವೆ. ಇವುಗಳಿಗೆ ಎಲುಬುಗಳಿಲ್ಲ, ರಕ್ತವಿಲ್ಲ. ಚಳಿಗಾಲದಲ್ಲಿ ಚೇಳುಗಳು ಶೀತನಿದ್ರೆಗೆ ಜಾರುತ್ತವೆ. ಅವುಗಳ ಜೀವಿತಾವಧಿಯಲ್ಲಿ ಚೇಳುಗಳು 7 ಸಲ ಅವುಗಳ ಕವಚವನ್ನು ಬದಲಾಯಿಸುತ್ತವೆ. ಅತ್ಯಂತ ಕಡಮೆ ಪ್ರಮಾಣದ ಆಮ್ಲಜಕದಲ್ಲಿಯೂ ಸಹ ಇವು ಬದುಕಬಲ್ಲವು. ಕಾರಣ ಇವು ನೀರಿನಡಿಗೂ ಸಹ ಎರಡು ದಿ ಗಂಟೆ ಬದುಕಬಲ್ಲವು. ಚೇಳುಗಳು ಸುಮಾರು 10 -25 ವರ್ಷ ಬದುಕುತ್ತವೆ.

ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ. ಈ ಜೀವಿಗಳಲ್ಲಿ 1750 ವರ್ಗಗಳಿದ್ದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮ...