Bengaluru, ಮಾರ್ಚ್ 14 -- SBI Lending Rates: ಸಾಲದ ಮೇಲಿನ ಬಡ್ಡಿದರವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪರಿಷ್ಕರಿಸಿದ್ದು, ಶನಿವಾರದಿಂದ (ಮಾರ್ಚ್ 15) ಜಾರಿಗೆ ಬರಲಿದೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತಾನು ನೀಡುವ ಸಾಲಗಳ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್‌ ರೇಟ್ಸ್ (ಎಂಸಿಎಲ್‌ಆರ್‌) ಅನ್ನು ಪ್ರಕಟಿಸಿದೆ. ಪರಿಷ್ಕೃತ ಎಂಸಿಎಲ್‌ಆರ್‌ ದರಗಳಗಳು ವಿವಿಧ ಹಣಕಾಸು ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಗೃಹ ಸಾಲ, ವೈಯಕ್ತಿಕ ಸಾಲ ಹಾಗೂ ಇತರೆ ಸಾಲ ಸೌಲಭ್ಯಗಳಿಗೆ ಅನ್ವಯವಾಗಲಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲ ಸಾಲದ ಅವಧಿಗಳಿಗೆ ಎಂಸಿಎಲ್‌ಆರ್ ದರವನ್ನು ಮಾರ್ಚ್‌ ತಿಂಗಳಲ್ಲಿ ಬದಲಾಯಿಸಿಲ್ಲ. ಒಂದು ದಿನದ ಬಳಿಕ ಮತ್ತು ಒಂದು ತಿಂಗಳ ಅವಧಿಯ ಸಾಲದ ದರ ಶೇ 8.20 ಹಾಗೂ ಮೂರು ತಿಂಗಳ ಸಾಲದ ದರ ಶೇ 8.55, ಆರು ತಿಂಗಳ ಸಾಲದ ದರ ಶೇ 8.90 ಇರಲಿದೆ. ಇನ್ನು, ಒಂದು ವರ್ಷದ ಸಾಲದ ಎಂಸಿಎಲ್‌ಆರ್‌ ದರ ಶೇಕಡ 9, ಎರಡು ವರ್ಷದ ಹಾಗೂ ಮೂರು ವರ್ಷದ ದರಗಳು ಅನುಕ್ರಮವಾಗಿ ಶೇ...