ಭಾರತ, ಮಾರ್ಚ್ 25 -- SBI Clerk Prelims: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶೀಘ್ರದಲ್ಲೇ ಕ್ಲರ್ಕ್ ಪ್ರಿಲಿಮ್ಸ್ 2025 ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ರಾಜ್ಯವಾರು ಹಾಗೂ ವರ್ಗವಾರು ಅಂಕಗಳೊಂದಿಗೆ ಮಾರ್ಚ್ 31ರ ಒಳಗೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಈ ನೇಮಕಾತಿ ಅಭಿಯಾನವು ಭಾರತದ ವಿವಿಧ ಶಾಖೆಗಳಲ್ಲಿ 8,773 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ.

ಎಸ್‌ಬಿಐ ಇತ್ತೀಚೆಗೆ ಕ್ಲರ್ಕ್/ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆನ್‌ಲೈನ್ ಪರೀಕ್ಷೆಯನ್ನು ನಡೆಸಿತ್ತು. ಪೂರ್ವಭಾವಿ ಪರೀಕ್ಷೆಗಳು ಫೆಬ್ರವರಿ 22, 27, 28 ಮತ್ತು ಮಾರ್ಚ್ 1 ರಂದು ದೇಶದಾದ್ಯಂತ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದವು. ಪ್ರಿಲಿಮ್ಸ್‌ನ‌ಲ್ಲಿ ಉತ್ತೀರ್ಣರಾಗಿ ಮೇನ್ಸ್‌ಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಈ ಪರೀಕ್ಷೆಯ ಅಧಿಕೃತ ದಿ...