Bengaluru, ಮೇ 5 -- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2025-26ರ ಆರ್ಥಿಕ ವರ್ಷದಲ್ಲಿ ಸುಮಾರು 18,000 ಹೊಸ ನೇಮಕಾತಿಗಳನ್ನು ಮಾಡಲಿದೆ. ಇವುಗಳಲ್ಲಿ 13,500 ರಿಂದ 14,000 ಹುದ್ದೆಗಳು ಗುಮಾಸ್ತ ಮಟ್ಟದಲ್ಲಿರುತ್ತವೆ ಮತ್ತು ಸುಮಾರು 3,000 ಹುದ್ದೆಗಳು ಅಧಿಕಾರಿ ಮಟ್ಟದಲ್ಲಿರುತ್ತವೆ. ಶನಿವಾರ 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಸ್ತುತಪಡಿಸುವಾಗ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ಸೆಟ್ಟಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಕಳೆದ ದಶಕದಲ್ಲಿ ಸ್ಟೇಟ್ ಬ್ಯಾಂಕ್ ನಡೆಸಿದ ಅತಿ ದೊಡ್ಡ ನೇಮಕಾತಿ ಇದಾಗಲಿದೆ. ಈ ಬಗ್ಗೆ ಮಾತನಾಡಿದ ಸಿ. ಎಸ್. ಸೆಟ್ಟಿ ಅವರು, ನಾವು ನಮ್ಮ ತಾಂತ್ರಿಕ ಪರಿಣತಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದ್ದೇವೆ ಮತ್ತು ಆದ್ದರಿಂದ ಈ ನೇಮಕಾತಿಯಲ್ಲಿ ಸುಮಾರು 1600 ಹುದ್ದೆಗಳು ಸಿಸ್ಟಮ್ ಆಫೀಸರ್‌ಗಳಿಗೆ ಇರುತ್ತವೆ. ಇದು ಒಂದು ದಶಕದಲ್ಲಿ ನಡೆದ ಅತಿ ಹೆಚ್ಚು ಸಿಸ್ಟಮ್ ಆಫೀಸರ್‌ಗಳ ನೇಮಕಾತಿಯಾಗಿದೆ ಎಂದಿದ್ದಾರೆ.

ಸ್ಟೇಟ್ ಬ್ಯಾಂಕ್ 2024-25ನೇ ಹಣಕಾಸು ವರ...