Bengaluru, ಮಾರ್ಚ್ 23 -- ಜೀವನಕ್ಕೊಂದು ಸ್ಫೂರ್ತಿಮಾತು: ಮನುಷ್ಯನಿಗೆ ಅಹಂ ಅನ್ನೋದು ಹುಟ್ಟಿನಿಂದ ಬರುವುದಿಲ್ಲ. ಸುತ್ತಮುತ್ತಲಿನ ವಾತಾವರಣ, ಘಟನೆಗಳು ಮನುಷ್ಯನಲ್ಲಿ ನಾನು, ನನ್ನದು ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ. ಇಂಥದ್ದೊಂದು ಭಾವನೆ, ಮತ್ತೊಬ್ಬರನ್ನು ಕೀಳಾಗೆ ನೋಡುವ ಸಂದರ್ಭಕ್ಕೆ ಕೂಡಾ ಕಾರಣವಾಗಬಹುದು. ಆದರೆ ಜೀವನದಲ್ಲಿ ಯಾರನ್ನು ಕೂಡಾ ನಿಕೃಷ್ಟವಾಗಿ ಕಾಣಬಾರದು.

ಆಂಗ್ಲ ಭಾಷೆಯಲ್ಲಿ Don't judge a book by its cover ಎಂಬ ಅರ್ಥಪೂರ್ಣ ವಾಕ್ಯವೊಂದು ಪ್ರಚಲಿತದಲ್ಲಿದೆ. ಯಾವುದೇ ವಿಚಾರವನ್ನಾಗಲೀ, ಯಾವ ವ್ಯಕ್ತಿಯನ್ನೇ ಆಗಲಿ ಕೀಳಾಗಿ ನೋಡಬಾರದು ಅನ್ನೋದು ಈ ಮಾತಿನ ಉದ್ದೇಶ. ಪ್ರತಿ ಬಲಶಾಲಿ ವ್ಯಕ್ತಿಗೆ ದೌರ್ಬಲ್ಯವಿರುತ್ತದೆ ಹಾಗೇ ಪ್ರತಿ ದುರ್ಬಲ ವ್ಯಕ್ತಿಗೆ ಬಲವಿರುತ್ತದೆ. ಆ ಶಕ್ತಿ ತಿಳಿಯುವವರೆಗೂ ಅವರು ದುರ್ಬಲರಾಗಿ ಕಾಣುತ್ತಾರೆ. ಹಾಗಾಗಿ ಯಾರನ್ನೂ ಕೀಳಾಗಿ ಕಾಣಬಾರದು. ಯಾರಲ್ಲಿ ಯಾವ ಶಕ್ತಿ ಅಡಗಿದೆಯೋ ಯಾರಿಗೆ ಗೊತ್ತು? 5 ರೂ. ಕೊಟ್ಟು ಖರೀದಿಸಿದ ಪೆನ್‌ ಆದರೂ ಅದಕ್ಕೆ 5 ಕೋಟಿ ರೂ. ಚೆಕ್ ಗೆ ಸ...