Bangalore, ಮಾರ್ಚ್ 15 -- Zee kannada saregamapa 2025: ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಇಂದಿನ ಸಂಚಿಕೆಯಲ್ಲಿ 'ಅಪ್ಪು 50' (Puneeth Rajkumar birthday) ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಝಲಕ್‌ ಅಥವಾ ಪ್ರೊಮೊವನ್ನು ಜೀ ಕನ್ನಡ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಂದು ರಾತ್ರಿ ಏಳುವರೆ ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಸರಿಗಮಪ ಶೋಗೆ ಆಗಮಿಸಿದ ಲೂಸ್ ಮಾದ ಯೋಗಿ‌ ಮತ್ತು ಶ್ರೀನಗರ ಕಿಟ್ಟಿ ಮೊದಲಿಗೆ ಅಪ್ಪು ಪ್ರತಿಮೆಗೆ ನಮಸ್ಕರಿಸಿದ್ದಾರೆ. "ಅಪ್ಪು ಹೆಸರಿಗೆ ನೀವಿಬ್ಬರು ಇಲ್ಲಿಗೆ ಬಂದಿದ್ದೀರಿ. ಥ್ಯಾಂಕ್‌ ಯು ಸೋ ಮಚ್‌. ಅಪ್ಪು ಸರ್‌ ಅವರ ಐವತ್ತನೇ ಹುಟ್ಟುಹಬ್ಬದ ಸವಿನೆನಪಿನ ಕಾರ್ಯಕ್ರಮಕ್ಕೆ ನೀವು ಬಂದಿದ್ದೀರಿ. ತುಂಬಾ ಖುಷಿಯಾಗಿದೆ. ಅಪ್ಪು ಬಗ್ಗೆ ನಿಮ್ಮ ಮಾತುಗಳನ್ನು ತಿಳಿಸಿ" ಎಂದು ಆಂಕರ್‌ ಅನುಶ್ರೀ ಕೇಳಿದಾಗ ಮೊದಲಿಗೆ ಲೂಸ್‌ ಮಾದ ಯೋಗಿ ಮಾತನಾಡುತ್ತಾರೆ.

"ಅಪ್ಪು ಜತೆಗೆ ನಾವು ಸುಮಾರು ಎರಡು ಎರಡೂವರೆ ವರ್ಷ ಪ್ರವಾಸ ಮಾಡಿದ್ವಿ. ಯಾರೇ ಕೂಗಾಡಲಿ ಸಿನಿಮಾ...