ಭಾರತ, ಏಪ್ರಿಲ್ 5 -- ಇತ್ತೀಚೆಗೆ ಹುಬ್ಬಳ್ಳಿಯ ಉಣಕಲ್‌ನ ಚಂದ್ರಮೌಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದ ಬಾಲಿವುಡ್‌ ನಟಿ ಸಾರಾ ಆಲಿ ಖಾನ್‌ ಇದೀಗ ಗುವಾಹಟಿಯ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದೇಗುಲ ದರ್ಶನದ ಬಳಿಕ ಬ್ರಹ್ಮಪುತ್ರ ನದಿಯಲ್ಲಿ ಬೋಟ್‌ ರೈಡ್‌ ಕೂಡ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ ಗುವಾಹಟಿಗೆ ಭೇಟಿ ನೀಡಿದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ ಸಮಯದಲ್ಲಿ ಸಾರಾ ಆಲಿ ಖಾನ್‌ ಅವರು ಬಿಳಿ ಕುರ್ತಾ, ಪೈಜಾಮ ಮತ್ತು ದುಪಟ್ಟಾ ಧರಿಸಿದ್ದರು. ದೋಣಿಯಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ ಫೋಟೋಗಳನ್ನೂ ಇವರು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಸಾರಾ ಧ್ಯಾನ ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಂದು ಫೋಟೋದಲ್ಲಿ ಅವರು ಮುಖದ ಒಂದು ಭಾಗವನ್ನು ಮುಚ್ಚಿಕೊಂಡು ನಡೆಯುತ್ತಿರುವುದು ಕಂಡುಬಂದಿದೆ. ಕೊನೆಯ ಚಿತ್ರದಲ್ಲಿ ನಟ ದೇವಾಲಯದಲ್ಲಿ ಆಶೀರ್ವಾದ ಪಡೆಯುತ್ತಿರುವುದನ್ನು ತೋರಿಸಲಾಗಿದೆ. ಸಾರಾ...