Bengaluru, ಫೆಬ್ರವರಿ 23 -- ಸಂಕ್ರಾಂತಿಕಿ ವಸ್ತುನಾಂ ಚಿತ್ರ ಮಾರ್ಚ್ 1ರಂದು ಸಂಜೆ 6ಗಂಟೆಗೆ ಜೀ ತೆಲುಗು ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಟಿವಿಯಲ್ಲಿ ಪ್ರಸಾರವಾದ ಅದೇ ದಿನವೇ ಒಟಿಟಿಯಲ್ಲೂ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ಮಾರ್ಚ್‌ 1ರಿಂದಲೇ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ತೆಲುಗು ಮಾತ್ರವಲ್ಲದೆ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರವನ್ನು ವೀಕ್ಷಣೆ ಮಾಡಬಹುದು.

ಈ ಮೂಲಕ ಒಟಿಟಿ ಮತ್ತು ಟಿವಿಯಲ್ಲಿ ಒಂದೇ ದಿನ ಬಿಡುಗಡೆಯಾಗುತ್ತಿರುವ ಮೊದಲ ತೆಲುಗು ಚಿತ್ರ ಎಂಬ ದಾಖಲೆಯನ್ನು ಈ ಸಿನಿಮಾ ತನ್ನದಾಗಿಸಿಕೊಂಡಿದೆ.

ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾದ ಈ ಸಿನಿಮಾ, ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟ ಪಡೆದುಕೊಂಡಿದೆ. ಈ ಚಿತ್ರವು ದಾಖಲೆಯ 272 ಕೋಟಿ ಕಲೆಕ್ಷನ್‌ ಮಾಡಿದೆ.

ಐಶ್ವರ್ಯಾ ರಾಜೇಶ್ ಮತ್ತು ಮೀನಾಕ್ಷಿ ಚೌಧರಿ ಈ ಚಿತ್ರದ ನಾಯಕಿಯರಾಗಿದ್ದಾರೆ.

Published by HT Digital Content Services with permission from HT Kannada....